ಇಂದು ಮೋದಿ ಪದಗ್ರಹಣ,ರಾಜ್ಯದ ನಾಲ್ವರಿಗೆ ಸ್ಥಾನ ಸಿಗೋದು ಪಕ್ಕಾ? ಯಾರೆಲ್ಲಾ ಗೊತ್ತಾ?

Views: 166
3ನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನನದಲ್ಲಿ ರಾಜ್ಯದಿಂದ ಯಾರಿಗೆಲ್ಲಾ ಅವಕಾಶ, ಸ್ಥಾನಮಾನ ಸಿಗಲಿದೆ ಅನ್ನೋ ಚರ್ಚೆ ದಟ್ಟವಾಗಿ ಹಬ್ಬಿದೆ. ಮೂಲಗಳ ಪ್ರಕಾರ ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ.
ಜೆಡಿಎಸ್ನಿಂದ ಕುಮಾರಸ್ವಾಮಿ ಸಂಪುಟ ದರ್ಜೆ ಸ್ಥಾನ ಸಿಗೋ ಸಾಧ್ಯತೆ ಇದೆ. ಇನ್ನು, ಪ್ರಲ್ಹಾದ್ ಜೋಶಿ ಮತ್ತೊಮ್ಮೆ ಕ್ಯಾಬಿನೆಟ್ ಸೇರೋದು ಪಕ್ಕಾ ಆಗಿದೆ. ಮಾಜಿ ಸಿಎಂ ಬೊಮ್ಮಾಯಿಗೂ ಮೋದಿ ಸಂಪುಟದಲ್ಲಿ ಸೇರ್ತಾರೆ ಅನ್ನೋ ಮಾತು ಇದೆ. ಎಸ್ಸಿ ಕೋಟಾದಲ್ಲಿ ಕಾರಜೋಳಗೂ ಲಕ್ ಖುಲಾಯಿಸಬಹುದು ಅನ್ನೋ ಚರ್ಚೆಯೂ ಇದೆ.
ಸದ್ಯಕ್ಕೆ ಈ ನಾಲ್ವರಿಗೆ ಸೇರ್ಪಡೆ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲವಾದರೂ ಎಲ್ಲಾ ಸಂಸದರು ದೆಹಲಿಯಲ್ಲೇ ಇದ್ದಾರೆ. ರಾಜ್ಯಕ್ಕೆ ಈ ಬಾರಿ 3 ರಿಂದ 4 ಸ್ಥಾನಗಳು ಕೇಂದ್ರದಲ್ಲಿ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ. ಬಿಜೆಪಿ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಬಹುಮತ ಗಳಿಸಲು ಸಾಧ್ಯವಾಗದ ಕಾರಣ ಮಿತ್ರಪಕ್ಷಗಳಿಗೆ ಸಂಪುಟದಲ್ಲೂ ಅವಕಾಶ ಕಲ್ಪಿಸಬೇಕಾಗಿದೆ. ಹೀಗಾಗಿ ಮೊದಲ ಕಂತಿನಲ್ಲೇ ಹೆಚ್.ಡಿ.ಕುಮಾರಸ್ವಾಮಿ ಸಚಿವ ಸ್ಥಾನ ಬಹುತೇಕ ನಿಶ್ಚಿತ ಎನ್ನಲಾಗಿದೆ.

ಇನ್ನೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆದ್ದಿರುವ ಡಾ. ಸಿ.ಎನ್.ಮಂಜುನಾಥ್ ಅವರನ್ನು ಸಹ ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಬಿಜೆಪಿ ಸಕಾರಾತ್ಮಕ ನಿಲುವು ಇಟ್ಟುಕೊಂಡಿದೆ. ಒಂದು ಕಡೆ ಕುಮಾರಸ್ವಾಮಿ, ಮತ್ತೊಂದು ಕಡೆ ಡಾ.ಸಿ.ಎನ್. ಮಂಜುನಾಥ್ ಸೇರ್ಪಡೆಯಾದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಆನೆ ಬಲ ಬರಲಿದೆ ಎಂಬ ಲೆಕ್ಕಾಚಾರವು ಇದೆ. ಒಂದು ಮೂಲದ ಪ್ರಕಾರ, ಡಾ. ಸಿ.ಎನ್.ಮಂಜುನಾಥ್ ಅವರಿಗೆ ಎರಡನೇ ಅವಧಿಯಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗುವ ವೇಳೆ ಅವಕಾಶ ಸಿಗಬಹುದು ಎಂಬ ಮಾತುಗಳು ಕೇಳಿ ಬಂದಿವೆ.






