ಭಾನುವಾರ ಸಂಜೆ ಮೋದಿ ಮಿತ್ರಪಕ್ಷಗಳ ಸಚಿವರ ಜೊತೆಯಲ್ಲೇ ಪ್ರಮಾಣವಚನ

Views: 41
ದೆಹಲಿ :ಇಂದು ನರೇಂದ್ರ ಮೋದಿ ಅವರು ರಾಷ್ಟ್ರಪತಿಯನ್ನು ಭೇಟಿ ಮಾಡಲಿದ್ದಾರೆ. ಅಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ನರೇಂದ್ರ ಮೋದಿ ಹಕ್ಕು ಮಂಡಿಸಲಿದ್ದಾರೆ. ಕ್ಯಾಬಿನೆಟ್ ಸದಸ್ಯರ ಲಿಸ್ಟ್ನ ಅಂತಿಮಗೊಳಿಸಿದ ಬಳಿಕ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.ಜೂನ್ 9ರ ಸಂಜೆ 6 ಗಂಟೆಗೆ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮಿತ್ರಪಕ್ಷಗಳ ಸಚಿವರ ಜೊತೆಯಲ್ಲೇ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
ಎಲ್ಲಾ ಮಿತ್ರ ಪಕ್ಷಗಳಿಗೂ ಮೋದಿ ಸಂಪುಟದಲ್ಲಿ ಸ್ಥಾನ
ಮೋದಿ ಸಂಪುಟದಲ್ಲಿ ಎಲ್ಲಾ ಮಿತ್ರಪಕ್ಷಗಳಿಗೂ ಸ್ಥಾನಮಾನ ಸಿಗುವ ನಿರೀಕ್ಷೆ ಇದೆ. ಅದರಲ್ಲೂ ಕಿಂಗ್ ಮೇಕರ್ಗಳಾದ ಟಿಡಿಪಿ ಮತ್ತು ಜೆಡಿಯುಗೆ ಹೆಚ್ಚಿನ ಆದ್ಯತೆ ಸಿಗೋ ಲಕ್ಷಣವಿದೆ. ಕೇಂದ್ರ ಕ್ಯಾಬಿನೆಟ್ನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಕೂಡ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಅಲ್ಲದೇ ಆಯಾ ಪಕ್ಷಗಳ ಸ್ಥಾನದ ಆಧಾರದ ಮೇಲೆ ಸಚಿವ ಸ್ಥಾನಗಳ ಹಂಚಿಕೆ ನಡೆಯೋದು ಬಹುತೇಕ ಪಕ್ಕಾ ಆಗಿದೆ. ಈ ಮೂಲಕ ಹಂಗಿನ ಅರಮನೆಯಲ್ಲಿ ಎಲ್ಲರನ್ನೂ ಸಮಾಧಾನಪಡಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯೋನ್ಮುಖವಾಗಿದೆ.
ಟಿಡಿಪಿಯಿಂದ ಮೂವರು ಕೇಂದ್ರ ಸಂಪುಟ ಸೇರ್ಪಡೆ
ಜೆಡಿಯುನಿಂದಲೂ ಎರಡರಿಂದ ಮೂವರು ಪದಗ್ರಹಣ
ಕರ್ನಾಟಕದ ಜೆಡಿಎಸ್ನಿಂದ ಹೆಚ್.ಡಿ.ಕುಮಾರಸ್ವಾಮಿ
ಎಲ್ಜೆಪಿಯಿಂದ ಚಿರಾಗ್ ಪಾಸ್ವಾನ್ ಪದಗ್ರಹಣ ನಿರೀಕ್ಷೆ
ಶಿವಸೇನೆ(ಶಿಂಧೆ) ಪಕ್ಷದಿಂದ ಒಬ್ಬರು ಪದಗ್ರಹಣ ಸಾಧ್ಯತೆ
ರಾಜ್ಯ ಖಾತೆ ಸಚಿವರು ಪ್ರಮಾಣವಚನ ಪಡೆಯೋ ಸಾಧ್ಯತೆ
ನರೇಂದ್ರ ಮೋದಿ ಅವರು 1962ರ ಬಳಿಕ ಇದೇ ಮೊದಲ ಬಾರಿಗೆ ಸತತ ಮೂರನೇ ಸಲ ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ.






