ರಾಜಕೀಯ

ನೂತನ ಸರ್ಕಾರದಲ್ಲಿ ಕೃಷಿ ಸಚಿವ ಸ್ಥಾನದ ಆಕಾಂಕ್ಷಿ ಎಂದ ಕುಮಾರಸ್ವಾಮಿ 

Views: 58

ನವದೆಹಲಿ: ಇಂದು ನಡೆದ ಎನ್ ಡಿಎ ಸಭೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಭಾಗವಹಿಸಿದ್ದಾರೆ.

ಸರ್ಕಾರ ರಚನೆಗೆ ಮುನ್ನ ಜೆಡಿಎಸ್‌ನ ಬೇಡಿಕೆಗಳೇನು ಎಂದು  ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ, “ನಮ್ಮಲ್ಲಿ ಅಂತಹ ಯಾವುದೇ ಬೇಡಿಕೆ ಇಲ್ಲ. ಬಹುಕಾಲದಿಂದ ಇರುವ ಕರ್ನಾಟಕದ ಸಮಸ್ಯೆಗಳ ಪರಿಹಾರ ನಮ್ಮ ಆದ್ಯತೆಯಾಗಿದೆ. ಪ್ರಾತಿನಿಧ್ಯ ನೀಡುವ ಬಗ್ಗೆ  ನರೇಂದ್ರ ಮೋದಿ ನಿರ್ಧರಿಸುತ್ತಾರೆ ಎಂದರು.

ತಾವು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ ಎನ್‌ಡಿಎ ನಾಯಕತ್ವ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.

ತಾವು ಕೃಷಿ ಸಚಿವರಾಗುತ್ತಾರೆ ಎಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇತರ ಹಲವಾರು ಜೆಡಿ(ಎಸ್) ನಾಯಕರು ಇದೇ ರೀತಿಯ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಎನ್ ಡಿಎ ನಾಯಕತ್ವ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಹೇಳುವ ಮೂಲಕ ಅವರು ತಮ್ಮ ಪಕ್ಷದ ಆಸಕ್ತಿ ಕೃಷಿ ಇಲಾಖೆಯಲ್ಲಿದೆ ಎಂದು ಒಪ್ಪಿಕೊಂಡರು.

ನಮ್ಮ ಪಕ್ಷದ ಹಿತಾಸಕ್ತಿ ಕೃಷಿ ಇಲಾಖೆಯಲ್ಲಿದೆ. ಮೊದಲಿನಿಂದಲೂ ನಮ್ಮ ಹೋರಾಟ ರೈತ ಸಮುದಾಯಕ್ಕೆ ಒಳಿತು ಮಾಡುವತ್ತ ಸಾಗಿದೆ ಎಂದು ಇಂದಿನ ಎನ್‌ಡಿಎ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Related Articles

Back to top button
error: Content is protected !!