ಶನಿವಾರ ಮೋದಿ ಪ್ರಮಾಣವಚನ ಸ್ವೀಕಾರ!

Views: 95
ನವದೆಹಲಿ,:ದೇಶದ ಪ್ರಧಾನಿಯಾಗಿ ನರೇಂದ್ರ ದಾಮೋಧರದಾಸ್ಮೋದಿ ಅವರು ಈ ತಿಂಗಳ 8 ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿಯಾಗಿ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಸಚಿವರಾಗಿ ಎನ್ಡಿಎ ಪಕ್ಷಗಳ ಕೆಲ ನಾಯಕರ ಪ್ರಮಾಣವಚನ ಸ್ವೀಕಾರವೂ ನಡೆಯಲಿದೆ.
ಎನ್ಡಿಎ ಸಂಸದೀಯ ಪಕ್ಷದ ಸಭೆ ಜೂ.7 ರಂದು ನಡೆಯಲಿದ್ದು, ಅಂದು ನರೇಂದ್ರಮೋದಿ ಅವರನ್ನು ಎನ್ಡಿಎನ ಸಂಸದೀಯ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ. ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಎನ್ಡಿಎ ಎಲ್ಲ ನೂತನ ಲೋಕಸಭಾ ಸದಸ್ಯರಿಗೆ ಸೂಚನೆ ರವಾನಿಸಲಾಗಿದೆ. ಇದಾದ ಬಳಿಕ ಮೋದಿ ಅವರು ರಾಷ್ಟ್ರಪತಿ ಬಳಿಗೆ ತೆರಳಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದು, ಜೂ. 8 ರಂದು ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುವರು.
ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಎನ್ಡಿಎ ಎಲ್ಲ ಅಂಗಪಕ್ಷಗಳ ನಾಯಕರುಗಳ ಮಹತ್ವದ ಸಭೆ ಇಂದು ಸಂಜೆ ದೆಹಲಿಯಲ್ಲಿ ನಡೆಯಲಿದ್ದು, ಪ್ರಧಾನಿಯಾಗಿ ನರೇಂದ್ರಮೋದಿ ಅವರು ಜೂ. 8 ರಂದು ಪ್ರಮಾಣವಚನ ಸ್ವೀಕರಿಸುವ ಮುಹೂರ್ತವನ್ನು ಈ ಸಭೆಯಲ್ಲಿ ನಿಗದಿ ಮಾಡಲಾಗುತ್ತದೆ ಎಂದು ಎನ್ಡಿಎ ಮೂಲಗಳು ಹೇಳಿವೆ.
ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಎನ್ಡಿಎ ಮೈತ್ರಿ ಪಕ್ಷದ ನಾಯಕರ ಸಭೆ ಸಂಜೆ 4ಗಂಟೆಗೆ ನಡೆಯಲಿದ್ದು, ಈ
ಸಭೆಯಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆಗಳ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಹಾಗೆಯೇ, ಪ್ರಧಾನಿ ಹುದ್ದೆಯ ಪ್ರಮಾಣವಚನ ಸ್ವೀಕಾರದ ದಿನಾಂಕ ನಿಗದಿಯು ಆಗಲಿದ್ದು, ಜೂ.8 ರಂದು ಪ್ರಧಾನಿಯಾಗಿ 3ನೇ ಬಾರಿಗೆ ನರೇಂದ್ರಮೋದಿ ಅವರು ಪ್ರಮಾಣವಚನ ಸ್ವೀಕರಿಸಲು ಮುಹೂರ್ತ ನಿಗದಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸುವ ಚರ್ಚೆಗಳು ನಡೆಯಲಿವೆ.
ಎನ್ಡಿಎ ಒಕ್ಕೂಟ ಭದ್ರ ಎಂಬ ಸಂದೇಶವನ್ನು ಈ ಇಬ್ಬರೂ ನಾಯಕರು ರವಾನಿಸಿದ್ದು, 3ನೇ ಬಾರಿಗೆ ಪ್ರಧಾನಿ ಹುದ್ದೆ ಅವರ ಮೋದಿ ಅವರ ಹಾದಿಗೆ ಇದ್ದ ಅಡ್ಡಿ ಆತಂಕಗಳೆಲ್ಲ ನಿವಾರಣೆಯಾಗಿದ್ದು, ಮೋದಿ ಅವರು ಜೂ. 8 ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಅಂತಿಮಗೊಂಡಂತಾಗಿದೆ.






