ರಾಜಕೀಯ

ಅಣ್ಣಾಮಲೈ ಸೋಲು, ಮೇಕೆಯ ಕೊರಳಲ್ಲಿ ಅಣ್ಣಾಮಲೈ ಫೋಟೋ ಹಾಕಿ ಮೆರವಣಿಗೆ  ಮಾಡಿದ ಡಿಎಂಕೆ 

Views: 322

ಚೆನ್ನೈ: ಬಿಜೆಪಿಯ ಸ್ಟಾರ್ ಪ್ರಚಾರಕ ಹಾಗೂ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಅವರು ಸೋಲನ್ನು ಅನುಭವಿಸುವುದು ಬಹುತೇಕ ಖಚಿತವಾಗುತ್ತಿದ್ದಂತೆ ಡಿಎಂಕೆ ಕಾರ್ಯಕರ್ತರು ಮೇಕೆಯ ಕೊರಳಲ್ಲಿ ಅಣ್ಣಾಮಲೈ ಫೋಟೋವನ್ನು ನೇತುಹಾಕಿ ಮೆರವಣಿಗೆ ನಡೆಸಿದ್ದಾರೆ.

ಅಣ್ಣಾಮಲೈ ಅವರು ದಕ್ಷಿಣ ಬೆಂಗಳೂರಿನಲ್ಲಿ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಆಗಿದ್ದಾಗ ಅವರು ಕರ್ನಾಟಕದ ‘ಸಿಂಗಮ್’ ಅಥವಾ ‘ಸಿಂಹ’ ಎಂಬ ಬಿರುದನ್ನು ಪಡೆದಿದ್ದರು. ಇದನ್ನು ವಿರೋಧಿಸಿದ್ದ ತಮಿಳುನಾಡಿನ ಕೆಲವರು ಅಣ್ಣಾಮಲೈ ಸಿಂಹವಲ್ಲ ಆಡು ಎಂದು ಲೇವಡಿ ಮಾಡಿದ್ದರು. ಅದರ ಸೂಚ್ಯವಾಗಿ ಇದೀಗ ಆಡಿನ ಮೆರವಣಿಗೆ ಮಾಡಿದ ನಂತರ ಮಟನ್ ಬಿರಿಯಾನಿ ತಯಾರಿಸಿ ಹಂಚಿದ್ದಾರೆ.

 

Related Articles

Back to top button
error: Content is protected !!