ಮೈಸೂರು ಮಹಾರಾಜ ಯದುವೀರ್ ಒಡೆಯರ್ ಭರ್ಜರಿ ಗೆಲುವು, ಅತಿ ಹೆಚ್ಚು ಲೀಡ್ ಪಡೆದ ಖ್ಯಾತಿ

Views: 175
ಮೈಸೂರು ಲೋಕಸಭಾ ಕ್ಷೇತ್ರ: ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ತೀವ್ರ ಮುಜುಗರ ಉಂಟಾಗಿದ್ದು, ರಾಜವಂಶಸ್ಥನಿಗೆ ಪ್ರಜಾಪ್ರಭುತ್ವದ ಅಧಿಕಾರ ಒಲಿದಿದೆ. ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿ ಬಿಜೆಪಿಯಿಂದ ಕಣಕ್ಕಿಳಿದ ಯದುವೀರ್ ಒಡೆಯರ್ ಭರ್ಜರಿ ಜಯ ಗಳಿಸಿದ್ದಾರೆ. ಎಣಿಕೆಯ ಯಾವ ಹಂತದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಸ್ಪರ್ಧೆ ಕೊಡದೇ ಹೀನಾಯ ಸೋಲು ಕಂಡಿದ್ದಾರೆ. ಜಾತಿ ಲೆಕ್ಕಾಚಾರ ಮೀರಿ ಯದುವೀರ್ ವಿಜಯ ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಯದುವೀರ್ – 7,95,503 ಮತಗಳು.
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ – 6,56,241 ಮತಗಳು.
ಅಂತರ: 1,39,262 ಮತಗಳು.
ಯದುವೀರ್ ಒಡೆಯರ್ 1,39,262 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ, ಬಿಜೆಪಿ ಪಕ್ಷದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಬಿಜೆಪಿ ಸಂಸದರುಗಳಲ್ಲಿ ಅತಿ ಹೆಚ್ಚು ಲೀಡ್ ಪಡೆದ ಖ್ಯಾತಿಗೆ ಯದುವೀರ್ ಪಾತ್ರರಾಗಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್ ಸೇರಿ ಒಟ್ಟು ಐದು ಬಾರಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಎರಡು ಬಾರಿ ಸಿ.ಹೆಚ್ ವಿಜಯ್ಶಂಕರ್, ಎರಡು ಬಾರಿ ಪ್ರತಾಪ್ ಸಿಂಹ ಗೆಲುವು ಕಂಡಿದ್ದರು. ಇದೀಗ ಯದುವೀರ್ ಗೆಲುವಿನ ನಗೆ ಬೀರಿದ್ದಾರೆ.
ಕಳೆದ ಬಾರಿ ಪ್ರತಾಪ್ ಸಿಂಹ 1,38,647 ಮತಗಳ ಲೀಡ್ನಲ್ಲಿ ಗೆದ್ದಿದ್ದರು. ಇದೀಗ 1,39,232 ಅಂತರದಿಂದ ಬಿಜೆಪಿ ದಾಖಲೆ ಬರೆದಿದೆ.






