ಶಿಕ್ಷಣ

ಕೊಡ್ಲಾಡಿ ಶಂಕರ ನಾಯ್ಕ ಇವರಿಗೆ PhD ಪದವಿ

Views: 106

ಕೋಟ:ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ಶಂಕರ ನಾಯ್ಕ .ಬಿ ಇವರು ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕರಾದ ಡಾ‌. ಬಾಲಾಜಿ ಭೋವಿ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ “lmpact of lnternational Financial Reporting Standards on Manufacturing Companies in India” ಮಹಾಪ್ರಬಂಧಕ್ಕೆ ತಮಿಳುನಾಡಿನ ಭಾರತೀಯಾರ್ ವಿಶ್ವವಿದ್ಯಾನಿಲಯ PhD ಪದವಿಯನ್ನು ನೀಡಿ ಗೌರವಿಸಿದೆ.

ಪ್ರಸ್ತುತ ಇವರು ಕೋಟ-ಪಡುಕೆರೆಯ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಕೊಡ್ಲಾಡಿ ಗ್ರಾಮದ ಸೂರ ನಾಯ್ಕ ಮತ್ತು ಶ್ರೀಮತಿ ಮುಖಾಂಬಿಕಾ ದಂಪತಿಗಳ ಪುತ್ರರಾಗಿರುತ್ತಾರೆ.

Related Articles

Back to top button
error: Content is protected !!