ಯುವಜನ

ಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ

Views: 0

ಸಂಘಟನೆಯ ಯಶಸ್ಸಿಗೆ ಸಮರ್ಪಣಾ ಭಾವ ಬೇಕು-ಕೆ. ಗೋಪಾಲ ಪೂಜಾರಿ
ಸಂಘಟನೆಯನ್ನು ಹುಟ್ಟುಹಾಕಿ ಮುನ್ನಡೆಸುವಾಗ ಸಮಸ್ಯೆಗಳು ಎದುರಾಗುವುದು ಸಹಜ. ಸಂಘಟಕರು ಅರ್ಪಣಾ ಭಾವದಿಂದ ಮುನ್ನುಗ್ಗಿದರೆ ಅವುಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಬಹುದು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಮರವಂತೆ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ಭಾನುವಾರ ನಡೆದ ಇಲ್ಲಿನ ನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಂಘಟನೆಯ ಮುಂದಾಳುಗಳಿಗೆ ಸ್ವಹಿತಾಸಕ್ತಿ ಇರಬಾರದು. ಅದು ಇನ್ನೊಂದು ಸಮುದಾಯವನ್ನು ದ್ವೇಷಿಸಬಾರದು. ಎಲ್ಲರ ಬೆಂಬಲದೊಂದಿಗೆ ತಮ್ಮ ಸಮುದಾಯದಲ್ಲಿ ನಾಯಕತ್ವ ಬೆಳೆಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ ಪೂಜಾರಿ, ಯುವ ಬಿಲ್ಲವ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜಗದೀಶ ಪೂಜಾರಿ, ಹೆಮ್ಮಾಡಿ ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಉದಯ ಪೂಜಾರಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಾಪಕ, ಸಂಘಟನಾ ಅಧ್ಯಕ್ಷ ಎಂ. ಅಣ್ಣಪ್ಪ ಬಿಲ್ಲವ ಸ್ವಾಗತಿಸಿ, ಸಂಘ ನಡೆದುಬಂದ ದಾರಿಯನ್ನು ವಿವರಿಸಿದರು. ಅಧ್ಯಕ್ಷ ಗಣೇಶ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮಯ್ಯ ಬಿಲ್ಲವ ವಂದಿಸಿದರು.
ಹಿರಿಯ ಸಾಧಕ ಎಸ್. ಜನಾರ್ದನ ಮರವಂತೆ, ಕೆಇಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಿಶನ್ ಪೂಜಾರಿ, ಯೋಗಪಟು ಧನ್ವಿ ಪೂಜಾರಿ, ಚೆಸ್‍ಪಟು ಯಶಸ್ವಿ, ಕಬಡ್ಡಿಪಟು ಸಾತ್ವಿಕ್, ಮಹಾಭಾರತ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವೈಷ್ಣವಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಕಾರ್ಯಕ್ರಮದ ಪ್ರಧಾನ ಪೋಷಕರನ್ನು ಗೌರವಿಸಲಾಯಿತು.
ಸಾಮೂಹಿಕ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ದೇಯಿ ಬೈದ್ಯೆತಿ ಕೃಪಪಾಪೋಷಿತ ಯಕ್ಷಗಾನ ಮಂಡಳಿಯಿಂದ ‘ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ’ ಪ್ರಸಂಗದ ಪ್ರದರ್ಶನ ನಡೆದುವು.

Related Articles

Back to top button
error: Content is protected !!