ಸಾಂಸ್ಕೃತಿಕ

23 ನೇ ವಾರ್ಷಿಕೋತ್ಸವ ಸಂಭ್ರಮ

Views: 29

ಕುಂದಾಪುರ: ನವೋದಯ ಫ್ರೆಂಡ್ಸ್ ಮತ್ತು ಕ್ರಿಕೆರ‍್ಸ್ ಹಾಗೂ ನವೋದಯ ಮಹಿಳಾ ಮಂಡಲ ಕದಿಕೆ ಬಡಾನಿಡಿಯೂರು, ಉಡುಪಿ ಇದರ 23 ನೇ ವಾರ್ಷಿಕೋತ್ಸವ ಸಂಭ್ರಮ ಬಡಾನಿಡಿಯೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಭಾಕರ ತಿಂಗಳಾಯರವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆಗೊಂಡಿತ್ತು. ಸಭೆಯ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷರಾದ ಶ್ರೀ ಉಮೇಶ್ ಪೂಜಾರಿ ವಹಿಸಿದರು. ಮುಖ್ಯ ಅತಿಥಿಗಳಾಗಿ ದಿನಕರ ಬಾಬು ಮಾಜಿ ಅಧ್ಯಕ್ಷರು ಜಿಲ್ಲಾ ಪಂಚಾಯತ್ ಉಡುಪಿ, ಪ್ರಸಾದರಾಜ್ ಕಾಂಚನ್ ಎಂ.ಡಿ. ಕಾಂಚನ್ ಹೂಂಡೈ, ಉಡುಪಿ, ಶ್ರೀ ಕಷ್ಣಮೂರ್ತಿ ಆಚಾರ್ಯ ಉಡುಪಿ, ರವಿರಾಜ ಸುವರ್ಣ ಮಲ್ಪೆ, ಶ್ರೀ ಗಿರೀಶ ಸಾಲ್ಯಾನ್ ಸದಸ್ಯರು ಬಡಾನಿಡಿಯೂರು ಗ್ರಾಮಪಂಚಾಯತ್, ಶ್ರೀ ಜೀವನ್‌ಕುಮಾರ್ ಶೆಟ್ಟಿ ಮಾಲಿಕರು ತೊಟ್ಟಂ ವೈನ್ಸ್, ಶ್ರೀ ಸುನೀಲ್ ಡಿ’ಸೋಜ ಮನ್ನ ಫಿಶ್ ಪ್ರೊಡಕ್ಟ್ ಕಾಪು, ಶ್ರೀ ಸಚಿನ್ ಆರ್. ಕೋಟ್ಯಾನ್ ಮಾಲಿಕರು ದುರ್ಗಾ ಇವೆಂಟ್ ಮ್ಯಾನೇಜ್‌ಮೆಂಟ್ ಬಡಾನಿಡಿಯೂರು, ಶ್ರೀಮತಿ ಹೇಮಾವತಿ ಎನ್., ಶ್ರೀಮತಿ ಕುಶಾಲ, ಶ್ರೀ ರಾಜೇಶ ಮೈಂದನ, ಶ್ರೀಮತಿ ಶೀಲಾ ಉಪಧ್ಯಕ್ಷರು ಬಡನಿಡಿಯೂರು ಗ್ರಾಮಪಂಚಾಯತ್, ಸಂತೋಷ ಕರ್ಕೇರ ಆಗಮಿಸಿದ್ದರು. ಶರತ್ ಕುಮಾರ್ ಸ್ವಾಗತಿಸಿ, ಸತೀಶ ಮೇಸ್ತಿ ನಿರೂಪಿಸಿ, ನವೋದಯ ಫ್ರೆಂಡ್ಸ್ ಅದ್ಯಕ್ಷರಾದ ಸಂತೋಷ ಕರ್ಕೇರ ವಂದಿಸಿದರು.

Related Articles

Back to top button
error: Content is protected !!