ಇತರೆ

ವಕ್ವಾಡಿ 8 ಸ್ಟಾರ್ ಕ್ರಿಕೆಟರ್ಸ್ ವತಿಯಿಂದ ದೇವರಾಡಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆ ಮತ್ತು ಶ್ರಮದಾನ

Views: 156

ಕನ್ನಡ ಕರಾವಳಿ ಸುದ್ದಿ: ವಕ್ವಾಡಿ 8 ಸ್ಟಾರ್ ಕ್ರಿಕೆಟರ್ಸ್ ವತಿಯಿಂದ ದೇವರಾಡಿ ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ  ಸಪರಿವಾರ ಚಿಕ್ಕು ದೈವಸ್ಥಾನದ  ರಸ್ತೆ ಹಾಗೂ ದೇವರಾಡಿ ಗ್ರೌಂಡ್ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಪ್ಲಾಸ್ಟಿಕ್ ಮುಕ್ತ ವಾತಾವರಣ ಮತ್ತು ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು. ಸ್ವಚ್ಛತಾ ಕಾರ್ಯಕ್ರಮವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಹಮ್ಮಿಕೊಳ್ಳುವ ಒಂದು ಜನಪ್ರಿಯ ಅಭಿಯಾನವಾಗಿದೆ.

ಇದು ಸಾರ್ವಜನಿಕರಲ್ಲಿ ನೈರ್ಮಲ್ಯದ ಅರಿವು ಮೂಡಿಸಲು ಮತ್ತು ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸಲು ಅತ್ಯಂತ ಪ್ರಮುಖವಾಗಿದೆ. ಸ್ವಚ್ಛ ಊರು – ಸುಂದರ ಊರು ಎಂಬ ಧ್ಯೇಯದೊಂದಿಗೆ ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು 8 ಸ್ಟಾರ್ ಕ್ರಿಕೆಟರ್ಸ್ ಬದ್ಧವಾಗಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದ ಎಲ್ಲಾ ಸದಸ್ಯರಿಗೆ ಹಾಗೂ ಸಹಕರಿಸಿದ ಗ್ರಾಮಸ್ಥರಿಗೆ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಊರಿನ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಎಲ್ಲರೂ ಇದೇ ರೀತಿಯ ಸಹಕಾರವನ್ನು ಮುಂದುವರಿಸೋಣ

ಸ್ವಚ್ಛತಾ ಕಾರ್ಯಕ್ರಮವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಹಮ್ಮಿಕೊಳ್ಳುವ ಒಂದು ಜನಪ್ರಿಯ ಅಭಿಯಾನವಾಗಿದೆ. ಇದು ಸಾರ್ವಜನಿಕರಲ್ಲಿ ನೈರ್ಮಲ್ಯದ ಅರಿವು ಮೂಡಿಸಲು ಮತ್ತು ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸಲು ಅತ್ಯಂತ ಪ್ರಮುಖವಾಗಿದೆ.

Related Articles

Back to top button
error: Content is protected !!