ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವ್ಯಕ್ತಿಯನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ ಇಬ್ಬರು ಸೇರಿ ಹತ್ಯೆ
Views: 82
ಕನ್ನಡ ಕರಾವಳಿ ಸುದ್ದಿ: ಅವರಿಬ್ಬರು 14 ವರ್ಷಗಳ ಹಿಂದೆ ಮದುವೆಯಾಗಿದ್ರು, ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ರು. ಆದರೇ ಇವರ ಮದ್ಯೆ ಇತ್ತೀಚಿಗೆ ವ್ಯಕ್ತಿಯೊಬ್ಬ ಎಂಟ್ರಿಯಾಗಿದ್ದ, ಆತನಿಂದ ಇಡೀ ಸಂಸಾರವೇ ಹಾಳಾಗಿದೆ. ಅಷ್ಟೇ ಅಲ್ಲ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವ್ಯಕ್ತಿಯನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ ಇಬ್ಬರು ಸೇರಿ ಹತ್ಯೆ ಮಾಡಿದ್ದಾರೆ.
ಏಪ್ರಿಲ್ 6ರಂದು ಬೆಳಗಾವಿಯ ಅನಗೋಳದಲ್ಲಿ ಇರೋ ಅವಿನಾಶ ಸೂರಣ್ಣವರ್ ಥೆಪಿಪಿ ಕ್ಲಿನಿಕ್ ಗೆ ವ್ಯಕ್ತಿಯೊಬ್ಬ ಎಂಟ್ರಿಯಾಗಿದ್ದನು. ಆತನೇ ಕೈಲಾಶ್ ಹೀಗೆ ಬಂದ ವ್ಯಕ್ತಿ ಅವಿನಾಶಗೆ ಮಸಾಜ್ ಮಾಡುವಂತೆ ಬೇಡಿಕೆ ಇಟ್ಟಿದ್ದನು. ಅದಕ್ಕೂ ಮೊದಲು ತಂಪು ಪಾನಿಯ ಸೇವನೆ ಮಾಡೋಣ ಎಂದು ಎರಡು ಬಾಟಲಿ ಮುಂದಿಟ್ಟ, ಹಿಂದೆ ಮುಂದೆ ಯೋಚನೆ ಮಾಡದ ಅವಿನಾಶ ತಂಪು ಪಾನಿಯ ಸೇವನೆ ಮಾಡಿದ್ರು. ಆಗಲೇ ಅವಿನಾಶ ಪ್ರಜ್ಱಎ ತಪ್ಪಿ ಕೆಳಗೆ ಬಿಳುತ್ತಾನೆ.
ತಕ್ಷಣ ಪ್ಲ್ಯಾನ್ ಸಕ್ಸಸ್ ಆಯಿತು ಎಂದ ಕೈಲಾಶ್ ಅಲ್ಲಿಯೇ ಇದ್ದ ತುಂಬಿದ ಸಿಲೆಂಡರ್ ಎತ್ತಿಗೆ ಆತನ ಎದೆಯ ಮೇಲೆ ಜೋರಾಗಿ ಬಿಸಾಕ್ತಾನೆ. ಬಳಿಕ ಇನ್ನೂ ಮೃತಪಟ್ಟನಾ ಎಂದು ಬ್ರಿದಿಂಗ್ ಚೆಕ್ ಮಾಡ್ತಾನೆ. ಆದರೇ ಇನ್ನೂ ಅವಿನಾಶ ಸತ್ತಿರಲ್ಲ, ಆಗಲೇ ಕೈಲಾಶ್ ತನ್ನ ಪ್ರೇಯಸಿ ಅನಿವಾಶ ಹೆಂಡ್ತಿ ಲಕ್ಷ್ಮೀಗೆ ಫೋನ್ ಮಾಡ್ತಾನೆ. ಆಕೆ ವಿಡಿಯೋ ಕಾಲ್ ನಲ್ಲಿ ಇನ್ನೂ ಪತಿ ಮೃತಪಟ್ಟಿಲ್ಲ ಎಂದು ಹೇಳುತ್ತಾಳೆ. ಆಗ ಮತ್ತೆ ಉಸಿರು ಗಟ್ಟಿಸಿ ಅವಿನಾಶ ಭೀಕರವಾಗಿ ಕೊಲೆ ಮಾಡಲಾಗುತ್ತದೆ. ಇದಾದ ಬಳಿಕ ಅಲ್ಲಿಂದ ಕೈಲಾಶ್ ಪರಾರಿಯಾಗುತ್ತಾನೆ.
ತನ್ನದೇ ಕ್ಲಿನಿಕ್ ನಲ್ಲಿ ಪತಿ ಹೀಗೆ ಸತ್ತು ಬಿದ್ದಿರೋದು ಗೊತ್ತಿದ್ರು, ಏನು ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಪತ್ನಿ ಲಕ್ಷ್ಮೀ ತನ್ನಿಬ್ಬರು ಮಕ್ಕಳ ಜೊತೆಗೆ ಅಲ್ಲಿಗೆ ಎಂಟ್ರಿ ಕೊಡ್ತಾಳೆ. ಪತಿ ಶೂಗರ್ ಹೆಚ್ಚಾಗಿ ಬಿದಿದ್ದಾರೆ ಎಂದು ಎಲ್ಲರಿಗೂ ಹೇಳುತ್ತಾಳೆ. ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕ್ ಮಾಡಿಸುತ್ತಾಳೆ. ಬಳಿಕ ಬಂದ ಪೊಲೀಸರಿಗೆ ಪತಿ ಶೂಗರ್ ಹೆಚ್ಚಾಗಿ ಬಿದ್ದು, ಗಾಯಗೊಂಡು ಮೃತಪಟ್ಟಿದ್ದಾರೆ. ನಮ್ಮಗೆ ಮರಣೊತ್ತರ ಪರೀಕ್ಷೆಯ ಅವಶ್ಯಕತೆ ಇಲ್ಲ ಹೇಳುತ್ತಾಳೆ.
ಅನುಮಾನಗೊಂಡ ಟಿಳಕವಾಡಿ ಪೊಲೀಸರು ಇದು ಅನುಮಾನ್ಪಸದ ಸಾವು ಎಂದು ಕೇಸ್ ದಾಖಲು ಮಾಡುತ್ತಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಬೆಚ್ಚಿ ಬಿಳಿಸುವ ಅಂಶಗಳು ಪತ್ತೆಯಾಗಿವೆ. ಕೈಲಾಸ್ ತಾನು ಸೇವಿಸುತ್ತಿದ್ದು ನಿದ್ದೆ ಮಾತ್ರೆ ಮೂರು ಸ್ಟ್ರೀಪ್ ಗಳನ್ನು ತಂಪು ಪಾನಿಯಲ್ಲಿ ಮಿಕ್ಸ್ ಮಾಡಿದ್ದನು. ಇದರಿಂದ ಅವಿನಾಶ ತಕ್ಷಣ ಪ್ರಜ್ಱಎ ತಪ್ಪಿದೆ ಎಂಬ ಅಂಶ ಬಯಲಾಗಿದೆ. ಇನ್ನೂ ಸಿಲೆಂಡರ್ ನಿಂದ ಬಲವಾಗಿ ಹೊಡೆದ ಹತ್ಯೆ ಮಾಡಲಾಗಿದೆ. ಈ ಭೀಕರ ಕೊಲೆಗೆ ಲಕ್ಷ್ಮೀ ಮತ್ತು ಕೈಲಾಶ್ ನಡುವಿನ ಅನೈತಿಕ ಸಂಬಂಧವೇ ಕಾರಣವಾಗಿದೆ.






