ಇತರೆ
ಕುಂದಾಪುರ:ಪ್ರಿಯಕರನ ಪ್ರಚೋದನೆ,ಯುವತಿ ಆತ್ಮಹತ್ಯೆ
Views: 296
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನ ಪ್ರಚೋದನೆಯಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾದ ಮಂಜುನಾಥ ಎಂಬಾತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ದೂರನ್ನು ಮನೆಯವರು ನೀಡಿದ್ದು ಅದರಂತೆ ಕೇಸು ದಾಖಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಶಂಕರನಾರಾಯಣ ಗ್ರಾಮದ ಬೆದ್ರಕಟ್ಟೆ ಕಾಲೋನಿ ನಿವಾಸಿ, ಕುಂದಾಪುರ ಸಾಯಿ ಆಸ್ಪತ್ರೆಯಲ್ಲಿ ಕ್ಲಿನಿಂಗ್ ಕೆಲಸ ಮಾಡಿಕೊಂಡಿದ್ದ ರಮ್ಯಾ ಎಂದು ಗುರುತಿಸಲಾಗಿದೆ. ಈಕೆ ಮಂಜುನಾಥ್ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನು ಆಕೆಯಲ್ಲಿ ಹಣ ಹೊಂದಿಸಿ ಕೊಡುವಂತೆ ಪೀಡಿಸುತಿದ್ದನು ಎಂದು ದೂರಲಾಗಿದೆ.
ಅದಕ್ಕೆ ಆಕೆ ನನ್ನಲ್ಲಿ ಹಣ ಇಲ್ಲ ಎಂದು ಹೇಳಿದಕ್ಕೆ ಮಂಜುನಾಥ್, ನೀನು ನನಗೆ ಬೇಡ ನೀನು ಎಲ್ಲಿಯಾದರೂ ಬಿದ್ದು ಸತ್ತು ಹೋಗು ಎಂದು ಹೇಳಿ ಆಕೆಗೆ ಸಾಯುವಂತೆ ಪ್ರಚೋದನೆ ನೀಡಿದ್ದಾನೆಂದು ದೂರಲಾಗಿದೆ. ಅದೇ ಕಾರಣಕ್ಕೆ ಆಕೆ ಎ.3ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಲಾಗಿದೆ.






