ಬಾರ್ಕೂರು ಹೇರಾಡಿ ಕಳ್ಳತನ: ಪೊಲೀಸರ ಯಶಸ್ವಿ ಕಾರ್ಯಾಚರಣೆ – ಖತರ್ನಾಕ್ ಕಳ್ಳನ ಬಂಧನ
Views: 105
ಕನ್ನಡ ಕರಾವಳಿ ಸುದ್ದಿ: ಕಳೆದ ಕೆಲವು ದಿನಗಳಿಂದ ಬಾರ್ಕೂರು ಪರಿಸರದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಹೇರಾಡಿ ಗ್ರಾಮದ ಮಂಜುನಾಥ ರಾವ್ ಅವರ ಮನೆಯ ಭಾರಿ ಕಳ್ಳತನ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಬಾರಕೂರು ಹೇರಾಡಿ ಬಳಿ ಮಾ.6ರಂದು ನಡೆದ ಮನೆಯಿಂದ ಕಳ್ಳತನ ಪ್ರಕರಣದ ಆರೋಪಿ ಬಾರಕೂರು ನಿವಾಸಿ ಪ್ರವೀಣ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ ಕಳವು ಮಾಡಿದ 101 ಗ್ರಾಂ ಚಿನ್ನದ ಆಭರಣ, 375 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ರೂ.7,500 ನಗದು ಹಣ ಸೇರಿದಂತೆ ಒಟ್ಟು ರೂ. 11,02,500ರ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ .
ಮೂಲತಃ ಕೇರಳದವನಾದ ಪ್ರವೀಣ್ ಎನ್ನುವ ಈ ವ್ಯಕ್ತಿ ಪಡುಕೆರೆಯಲ್ಲಿ ವಾಸಿಸುತ್ತಿದ್ದ ಈತ ಯಾವುದೇ ಕುರುಹು ಬಿಡದಂತೆ ನಗದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸುವ ಮೂಲಕ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಉಪನಿರೀಕ್ಷಕ ಅಶೋಕ್ ಮಾಳಬಾಗಿ, ಅಪರಾಧ ಪತ್ತೆ ಸಿಬಂದಿ ಕಿರಣ್, ಸಿದ್ದಪ್ಪ ಸಕನಳ್ಳಿ, ಸುರೇಶ್ ಬಾಬು ಹಾಗೂ ತನಿಖಾ ಸಹಾಯಕರಾದ ಎ.ಎಸ್.ಐ ಕೃಷ್ಣಪ್ಪ, ವಿಶ್ವನಾಥ್ ಶೆಟ್ಟಿ, ಜಯಶೀಲಾ ಪಾಲ್ಗೊಂಡಿದ್ದರು.






