ಮಾಲೀಕನ ಹೆಂಡತಿ ಜೊತೆ ಸಲುಗೆಯಿಂದ ಮಾತಾಡಿದ್ದಕ್ಕೆ ಗೂಡ್ಸ್ ಚಾಲಕ ಮತ್ತು ಹೆಂಡತಿಯ ಕೈ-ಕಾಲು ಕಟ್ಟಿ ಹಿಗ್ಗಾಮುಗ್ಗಾ ಥಳಿತ!
Views: 170
ಕನ್ನಡ ಕರಾವಳಿ ಸುದ್ದಿ: ಮಾಲೀಕನ ಹೆಂಡತಿ ಜೊತೆ ಸಲುಗೆಯಿಂದ ಮಾತಾಡಿದ ಎಂಬ ಕಾರಣಕ್ಕೆ ಗೂಡ್ಸ್ ಚಾಲಕನ ಜೊತೆ ಹೆಂಡತಿಯನ್ನು ಕೂಡ ಕರೆದೊಯ್ದು ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ನವನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೂಡ್ಸ್ ಚಾಲಕನನ್ನು ಕಿಡ್ನ್ಯಾಪ್ ಮಾಡಿದ ಮಾಲೀಕ ಬಳಿಕ ಹೆಂಡತಿಯನ್ನು ಕೂಡ ಗುಡ್ಡಕ್ಕೆ ಕರೆದುಕೊಂಡು ಹೋಗಿ ಇಬ್ಬರ ಕಾಲು-ಕೈ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಮಾಲೀಕನ ಪತ್ನಿಯ ಜೊತೆ ಗೂಡ್ಸ್ ಚಾಲಕ ಸಲುಗೆಯಿಂದ ಮಾತಾಡಿದ್ದೆ ದೊಡ್ಡ ತಪ್ಪಾಗಿದೆ. ಪತ್ನಿ ಹಾಗೂ ಚಾಲಕನ ಸಲುಗೆ ನೋಡಿ ಕೆಂಡಾಮಂಡಲನಾದ ಮಹಿಳೆ ಗಂಡ, ತನ್ನದೇ ಮನೆಯಲ್ಲಿ ಕೆಲಸಕ್ಕಿದ್ದ ಡ್ರೈವರ್ನನ್ನೇ ಕಿಡ್ನ್ಯಾಪ್ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಚಾಲಕನ ಕೈಗಳನ್ನು ಕಟ್ಟಿ ಹಲ್ಲೆ ಮಾಡಿ ಕೋಲಿನಿಂದ ಕಾಲು ಬೆನ್ನಿಗೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದಾರೆ.
ಪ್ರಕಾಶ್ ಹೊಸಮನಿ (25) ಎಂಬ ಚಾಲಕನನ್ನು ಮಾಲೀಕ ಯಂಕಪ್ಪ ಚೂರಿ ತುಳಸಿಗೇರಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅನೇಕರು ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಅಕ್ಟೋಬರ್ 3 ರಂದು ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
.ಹಲ್ಲೆ ಮಾಡುತ್ತಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ಯಂಕಪ್ಪ ಚೂರಿ, ಪರಸಪ್ಪ ಮಾದರ, ತುಳಸಪ್ಪ ಚೂರಿ, ಸಂಗಮೇಶ್ ಗೌಡರ ಸೇರಿ 10 ಜನರು ಹಲ್ಲೆ ಮಾಡಿದ್ದು, ಎಲ್ಲರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಾಗಲಕೋಟೆಯ ನವನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.






