ಮದರ್ ತೆರೇಸಾ ಶಿಕ್ಷಣ ಸಂಸ್ಥೆ: ಜೂನಿಯರ್ ಮತ್ತು ಲೋವರ್ ಪ್ರೈಮರಿ ಬೆಸ್ಟ್ ಸಂಸ್ಕೃತಿ ಕ್ಲಾಸ್ ಅವಾರ್ಡ -2025

Views: 598
ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲೊಂದಾದ ಶಂಕರನಾರಾಯಣದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಜೂನಿಯರ್ ಮತ್ತು ಪ್ರೈಮರಿ ವಿಭಾಗದ ವಿದ್ಯಾರ್ಥಿಗಳಿಗೆ *ಜೂನಿಯರ್ ಮತ್ತು ಲೋವರ್ ಪ್ರೈಮರಿ ಬೆಸ್ಟ್ ಸಂಸ್ಕೃತಿ ಕ್ಲಾಸ್ ಅವಾರ್ಡ-2025* ವಿಶೇಷ ಕಾರ್ಯಕ್ರಮ ನಡೆಯಿತು.
ಸಂಪ್ರದಾಯವು ಕುಟುಂಬವನ್ನು ಒಟ್ಟುಗೂಡಿಸುತ್ತದೆ. ಸಂಪ್ರದಾಯವು ವಿಶೇಷ ಪ್ರಾಮುಖ್ಯತೆಯೊಂದಿಗೆ ಜನರ ಅಥವಾ ಸಮಾಜದ ಗುಂಪಿನೊಳಗೆ ಹಾದುಹೋಗುವ ನಂಬಿಕೆಗಳು ಈ ದಿಶೆಯತ್ತ ಸಂಸ್ಥೆಯು ಶೈಕ್ಷಣಿಕ ವರ್ಷದ ಆರಂಭದಿಂದ ಪೂರ್ವ ಪ್ರಾಥಮಿಕ ವಿಭಾಗದಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಶೇಷ *ಸಂಸ್ಕೃತಿ ಡೇ* ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಸಂಪ್ರದಾಯಗಳ ಆಚರಣೆ ಕುಟುಂಬವನ್ನು ಅತ್ಯಂತ ಹತ್ತಿರಕ್ಕೆ ಹೇಗೆ ತರಬಲ್ಲವು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಉತ್ತಮವಾದ ವೇದಿಕೆಯನ್ನು ಕಲ್ಪಿಸಿರುವುದು ನಿಜಕ್ಕೂ ಪ್ರಶಂಸನಿಯ
ಜ.17 ರಂದು ಶುಕ್ರವಾರ ಹಮ್ಮಿಕೊಂಡ *ಬೆಸ್ಟ್ ಕ್ಲಾಸ್ ಕಂಟೆಸ್ಟ್* ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಇನ್ನೊಮ್ಮೆ ತಮ್ಮಲ್ಲಿ ಹುದುಗಿರುವ ಪ್ರತಿಭಾ ಕೌಶಲ್ಯವನ್ನು ವಿನೂತನವಾಗಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಭಾರತೀಯ ಸಮಾಜವು ವೈವಿದ್ಯಮಯ ವೈವಿದ್ಯತೆಯಿಂದ ಸಂಸ್ಕೃತಿಯ ಆಚರಣೆ ಹೇಗೆ ಸಮೃದ್ಧಿಯಾಗಿವೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಗಳಾದರು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ಧ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ರೆನಿಟಾ ಲೋಬೊ,ಮುಖ್ಯಶಿಕ್ಷಕ ಡಾ. ರವಿದಾಸ್ ಶೆಟ್ಟಿ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಕುಸುಮಾ ಶೆಟ್ಟಿ,ನೃತ್ಯ ಶಿಕ್ಷಕರಾದ ಜಗದೀಶ್ ಬನ್ನಂಜೆ ಜಂಟಿಯಾಗಿ ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಯೋಜಕಿ ದಿವ್ಯ ಸ್ವಾಗತಿಸಿ, ಶಿಕ್ಷಕಿಯರಾದ ರೇಷ್ಮಾ ಡಿ ಮೆಲ್ಲೋ ವಂದಿಸಿ, ಉಷಾ ಕಾರ್ಯಕ್ರಮವನ್ನು ನಿರೂಪಿಸಿದರು,
*ಜೂನಿಯರ್ ಮತ್ತು ಲೋವರ್ ಪ್ರೈಮರಿ ಬೆಸ್ಟ್ ಕ್ಲಾಸ್ ಕಂಟೆಸ್ಟ್ ವಿಜೇತರ ಯಾದಿ*
ಕ್ಲಾಸ್ I ಚಾಂಪಿಯನ್
ಕ್ಲಾಸ್ II ರನ್ನರ್
ಕ್ಲಾಸ್ I V ಚಾಂಪಿಯನ್
ಕ್ಲಾಸ್ III ರನ್ನರ್