ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ರೆಡ್ ಡೇ, ಕುಣಿದು ಸಂಭ್ರಮಿಸಿದ ಚಿಣ್ಣರು!

Views: 57
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಮಕ್ಕಳಿಗೆ ರೆಡ್ ಡೇ ಕಾರ್ಯಕ್ರಮವನ್ನು ಜೂನ್ 28 ರಂದು ಆಯೋಜಿಸಲಾಯಿತು.
ಮಕ್ಕಳು,ಶಾಲಾ ಮುಖ್ಯಸ್ಥರು,ಪ್ರಾಂಶುಪಾಲರನ್ನು ಹಾಗೂ ಆಡಳಿತ ಅಧಿಕಾರಿ ಯವರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ಕಾರ್ಯಕ್ರಮವನ್ನು ರಿಬ್ಬನ್ ಕತ್ತರಿಸುವುದರೊಂದಿಗೆ ಶಾಲಾ ಮುಖ್ಯಸ್ಥರಾದ ಶ್ರೀ ಸಂತೋಷ್ ಶೆಟ್ಟಿ ಅವರು ಉದ್ಘಾಟಿಸಿದರು.
ತದನಂತರ ಕೇಕ್ ಕತ್ತರಿಸಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು. ನಂತರ ಮಕ್ಕಳು ತಂದಿರುವ ಆಟಿಕೆಗಳು, ಕರಕುಶಲ ವಸ್ತುಗಳನ್ನು ಅಲಂಕರಿಸಲಾಯಿತು. ಅವುಗಳ ಕುರಿತು ಮಕ್ಕಳು ಮಾತನಾಡಿದರು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಅಡಪ ಹಾಗೂ ಆಡಳಿತ ಅಧಿಕಾರಿಯಾದ ಶ್ರೀಮತಿ ಆಶಾ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಂತರ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು
ಮಕ್ಕಳು ರೆಡ್ ಡೇ ಪದ್ಯವನ್ನು ಹೇಳಿ ಕುಣಿದು ಸಂಭ್ರಮಿಸಿದರು. ಎಲ್ಲ ಮಕ್ಕಳ ಭಾವಚಿತ್ರವನ್ನು ತೆಗೆಯಲಾಯಿತು. ಎಲ್ಲ ಮಕ್ಕಳು ಈ ದಿನವನ್ನು ಸಂತೋಷದಿಂದ ಸಂಭ್ರಮಿಸಿದರು.