ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಮುದ್ದುರಾಧಾ- ಮುದ್ದುಕೃಷ್ಣ ಸ್ಪರ್ಧೆ” ವಿಜ್ರಂಭಣೆಯ ಸಂಭ್ರಮ

Views: 429

ಕುಂದಾಪುರ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಮತ್ತು ಬ್ರಹ್ಮಶ್ರೀ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುರಾಧಾ- ಮುದ್ದುಕೃಷ್ಣ ಸ್ಪರ್ಧೆ ಅಗಸ್ಟ್ 31 ರಂದು ಶಾಲೆಯ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮೂರು ವರ್ಷದಿಂದ ಏಳು ವರ್ಷದವರೆಗಿನ ಪುಟಾಣಿಗಳಿಗೆ ಉಚಿತ ಪ್ರವೇಶದೊಂದಿಗೆ ನಡೆದ ಸ್ಪರ್ಧೆಯಲ್ಲಿ ಬೆಳಿಗ್ಗೆ ಶಾಲಾ ಸಂಚಾಲಕರಾದ ಸಂತೋಷ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶೈಕ್ಷಣಿಕ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ಅವರು ಸ್ವಾಗತಿಸಿ, ಶ್ರೀ ಕೃಷ್ಣನ ಸಂದೇಶ ನೀಡಿದ ಅವರು,ಹಿಂದೂ ಧರ್ಮದಲ್ಲಿ ಭಗವದ್ಗೀತೆಗೆ ಮಹತ್ವದ ಸ್ಥಾನವಿದೆ. ಶ್ರೀ ಕೃಷ್ಣನು ಮನುಕುಲದಲ್ಲಿ ಜ್ಞಾನದ ದೀಪವನ್ನು ಬೆಳಗಿಸಿದ್ದು, ಉತ್ತಮ ಜೀವನಮೌಲ್ಯ ಸಾರಿದ್ದ ಶ್ರೀ ಕೃಷ್ಣನ ಸಂದೇಶ ಎಲ್ಲರಿಗೂ ದಾರಿದೀಪವಾಗಲಿ. ಒಳ್ಳೆಯ ರೀತಿಯ ಜೀವನ ನಿರ್ವಹಣೆ ಮಾಡಿ ಸರಿಯಾದ ಬದುಕನ್ನು ನೆಲೆಸಿಕೊಂಡು ಸಾಗಿದರೆ ತನ್ನ ಕಷ್ಟ ಕಾರ್ಪಣ್ಯದಲ್ಲಿ ಶ್ರೀ ಕೃಷ್ಣನು ಸಂತೋಷ ಮನೆ ಮಾಡುತ್ತಾನೆ. ಗೀತೆಯ ಆದರ್ಶ ಕಥೆಯನ್ನು ವಿದ್ಯಾರ್ಥಿಗೆ ತಿಳಿ ಹೇಳಿ ಅತ್ಯುತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಸ್ಪರ್ಧೆಯಲ್ಲಿ 65 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಹಾವಭಾವ, ವೇಷಭೂಷಣ, ಪ್ರಸ್ತುತಿ, ಸಮಯದ ಮಿತಿ, ಗಾಯನಕ್ಕೆ ಅವಕಾಶ ನೀಡಿದ ಸ್ಪರ್ಧೆ ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಸ್ಥಳೀಯರು, ಪೋಷಕರು ಭಾಗವಹಿಸಿದ್ದರು.
ಸಮಾರೋಪ ಸಮಾರೋಪ
ಸಮಾರೋಪ ಸಮಾರಂಭದಲ್ಲಿ ಶಾಲೆಯ ಸಂಚಾಲಕ ಸಂತೋಷ ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಾತನಾಡಿ, ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯಲ್ಲಿ ನಿಮ್ಮೆಲ್ಲರ ಪಾತ್ರ ಅತೀ ಮುಖ್ಯವಾಗಿದ್ದು, ನಮ್ಮೊಂದಿಗೆ ಸದಾ ಸಹಕರಿಸಿ ಎಂದು ಶುಭ ಹಾರೈಸಿದರು.
ಸಭೆಯಲ್ಲಿ ಆಡಳಿತ ಅಧಿಕಾರಿ ಶ್ರೀಮತಿ ಆಶಾ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಕೋಡಿ ಬ್ಯಾರೀಸ್ ಸೀಸೈಡ್ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಯಶೀಲ ಶೆಟ್ಟಿ ಮಾತನಾಡಿ, ಇದೊಂದು ವಿನೂತನ, ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಹೆಮ್ಮೆ ಎನಿಸುತ್ತದೆ, ಪ್ರತಿ ಮಗು ಕೂಡ ಈ ದೇಶದ ತಮ್ಮಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ವಿಶಿಷ್ಟವಾದ ಸಂಪತ್ತನ್ನು ಸದ್ಬಳಕೆ ಮಾಡಿಕೊಂಡು, ಜೊತೆಗೆ ಶ್ರೀಕೃಷ್ಣನ ಆದರ್ಶಗಳನ್ನು ಬೆಳೆಸಿಕೊಂಡು ಸತ್ಪ್ರಜೆಯಾಗಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬೇಳೂರು ದಿನಕರ್ ಶೆಟ್ಟಿ ಉಪಸ್ಥಿತರಿದ್ದು ಅವರು ಮಾತನಾಡಿ, ವಿದ್ಯೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದರು.
ಮುಖ್ಯ ತೀರ್ಪುಗಾರರಾಗಿ ವಿದುಷಿ ಸುಫಲಿತ ಮನ್ವಿತ್, ಸುಶ್ಮಿತಾ ಸಾಲಿಗ್ರಾಮ, ವಿದುಷಿ ಅನುಷಾ ಉಮೇಶ್ ಪೂಜಾರಿ ಭಾಗವಹಿಸಿ ಸ್ಪರ್ಧೆಯ ಫಲಿತಾಂಶ ನಡೆಸಿಕೊಟ್ಟರು.
ಸ್ಪರ್ಧೆಯ ಫಲಿತಾಂಶ
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಆದ್ರಿತ್ ಪ್ರಥಮ, ವಿಹಲ್ಯ ಖಾರ್ವಿ ದ್ವಿತೀಯ, ಅನ್ವಿತ್ ತೃತೀಯ ಸ್ಥಾನ ಪಡೆದುಕೊಂಡರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಸಹಾಯಕ ಆಡಳಿತಾಧಿಕಾರಿ ಸುಮಂತ್ ಸ್ವಾಗತಿಸಿದರು.
ಶಿಕ್ಷಕಿ ದಿವ್ಯಾ ಶೆಟ್ಟಿ, ಶಿಕ್ಷಕಿ ಅಂಜಲಿ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿ ಅನಿತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಶಿಕ್ಷಕಿ ಅನಿತಾ ಧನ್ಯವಾದ ಸಮರ್ಪಿಸಿದರು.


















