ಶಿಕ್ಷಣ

ಹೆಚ್ಚಿನ ಅಂಕ ಗಳಿಸಲು ಶಿಕ್ಷಕರಿಂದ ಒತ್ತಡ:10ನೇ ತರಗತಿ ವಿದ್ಯಾರ್ಥಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ

Views: 100

ಕನ್ನಡ ಕರಾವಳಿ ಸುದ್ದಿ: ಹೆಚ್ಚಿನ ಅಂಕ ಗಳಿಸಲು ಶಿಕ್ಷಕರಿಂದ  ಒತ್ತಾಯಿಸಿದ್ದಕೆ ಬೇಸತ್ತು ಮತ್ತು ಶಾಲಾ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಬಾಲಕ 16 ವರ್ಷದ ಶೌರ್ಯ ಪಾಟೀಲ್.ಬಾಲಕನಿಂದ ವಶಪಡಿಸಿಕೊಂಡ ಆತ್ಮಹತ್ಯೆ ಪತ್ರದಲ್ಲಿ ಅವನ ಶಿಕ್ಷಕರು ಅವನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಶಾಲಾ ಶಿಕ್ಷಕರೊಬ್ಬರು ಈತನನ್ನು ಅಪಹಾಸ್ಯ ಮಾಡುತ್ತಿದ್ದರು. ಅಸಭ್ಯವಾಗಿ ನಡೆಸಿಕೊಂಡರೆಂಬ ಆರೋಪ ಕೇಳಿಬಂದಿದೆ. ಶಾಲಾ ಶಿಕ್ಷಕನ ವಿರುದ್ಧ ಬಾಲಕನ ತಂದೆ ಪ್ರದೀಪ್‌ ಪಾಟೀಲ್‌ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸೆಂಟ್ರಲ್ ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 2ರಲ್ಲಿ ಟ್ರ್ಯಾಕ್‌ಗೆ ಜಿಗಿದು ಸೇಂಟ್ ಕೊಲಂಬಾ ಶಾಲೆಯ ಶೌರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತನ ಶಾಲಾ ಬ್ಯಾಗ್‌ನಿಂದ ಡೆತ್‌ನೋಟ್‌ ವಶಕ್ಕೆ ಪಡೆಯಲಾಗಿದ್ದು, ತನ್ನ ಕೃತ್ಯಕ್ಕೆ ಮೂವರು ಶಿಕ್ಷಕರು ಕಾರಣ ಎಂದು ವಿದ್ಯಾರ್ಥಿ ದೂಷಿಸಿದ್ದಾನೆ.

ಕಳೆದ ಒಂದು ವರ್ಷದಿಂದ ನನ್ನ ಮಗನಿಗೆ ಶಿಕ್ಷಕರು ತೊಂದರೆ ಕೊಟ್ಟಿದ್ದಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದೆವು. ಆದರೆ, ಅವರು ನನ್ನ ಮಗನ ಕಲಿಕೆ ಮೇಲೆಯೇ ಆರೋಪ ಮಾಡಿದ್ದರು. ತರಗತಿಗಳ ಸಮಯದಲ್ಲಿ ಗಮನ ಹರಿಸಬೇಕು, ಗಣಿತದ ಅಂಕಗಳು ಕಳಪೆಯಾಗಿವೆ, ಅವನು ಅಧ್ಯಯನದ ಮೇಲೆ ಗಮನಹರಿಸಲು ಇಷ್ಟಪಡುವುದಿಲ್ಲ ಅಂತ ಹೇಳಿದ್ದರೆಂದು ಬಾಲಕನ ತಂದೆ ತಿಳಿಸಿದ್ದಾರೆ.

 

 

 

 

Related Articles

Back to top button
error: Content is protected !!