ಇತರೆ
ಸಾಸ್ತಾನ ಯುವತಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ 10.83 ಲಕ್ಷರೂ. ವಂಚನೆ
Views: 21
ಕನ್ನಡ ಕರಾವಳಿ ಸುದ್ದಿ: ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯಿಂದ 10.83 ಲಕ್ಷ ರೂ. ಪಡೆದು ವಂಚನೆ ಎಸಗಿದ ಘಟನೆ ಸಾಸ್ತಾನದಲ್ಲಿ ಸಂಭವಿಸಿದೆ. ಅಭಿಷೇಕ್ ಪ್ರಕರಣದ ಆರೋಪಿ.
ಸಾಸ್ತಾನ ಐರೋಡಿ ಗ್ರಾಮದ ಯುವತಿ ವರ್ಷಾಗೆ (23) ಅಭಿಷೇಕ್ ಹಲವು ಸಮಯದಿಂದ ಪರಿಚಯವಿದ್ದು, ಸರಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ 2025ರ ಅಕ್ಟೋಬರ್31ರಿಂದ 2026ರ ಮೇ 28ರ ವರೆಗೆ ವಿವಿಧ ಹಂತಗಳಲ್ಲಿ ಯುವತಿಯ ಬ್ಯಾಂಕ್ ಖಾತೆ, ಫೋನ್ ಪೇ ಹಾಗೂ ಗೂಗಲ್ ಪೇ ಮೂಲಕ ಒಟ್ಟು 10,83,000 ಹಣವನ್ನು ಪಡೆದುಕೊಂಡಿದ್ದಾನೆ ಎಂದು ದೂರಲಾಗಿದೆ.
ಹಣ ಪಡೆದ ಬಳಿಕ ಸರಕಾರಿ ಉದ್ಯೋಗ ಒದಗಿಸದೆ ಪಡೆದ ಹಣವನ್ನೂ ಹಿಂದಿರುಗಿಸದೆ ವಂಚನೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಕೆಲಸ ಕೊಡಿಸುವಂತೆ ಅಥವಾ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.






