ಶಿಕ್ಷಣ

ಸರ್ಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ: ಮಂದಾರ್ತಿಯಲ್ಲಿ ಮಾದಕ ರಕ್ಕಸನ ಮಾರಣಹೋಮ ಬೀದಿ ನಾಟಕ ಪ್ರದರ್ಶನ

Views: 20

ಕನ್ನಡ ಕರಾವಳಿ ಸುದ್ದಿ: ಸರ್ಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕರು ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಜನ ದಟ್ಟನೆಯಿದ್ದ ಮೂರು ಕಡೆಗಳಲ್ಲಿ ನಶಾ ಮುಕ್ತ ಭಾರತ ಅಭಿಯಾನದಡಿಯಲ್ಲಿ ಮಾದಕ ರಕ್ಕಸನ ಮಾರಣಹೋಮ ಎಂಬ ಬೀದಿ ನಾಟಕವನ್ನು ಆಡಿ ತೋರಿಸಿದರು.

ಸುಮಾರು 3000 ಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಈ ಬೀದಿ ನಾಟಕವನ್ನು ನೋಡಿ ಪ್ರಭಾವಿತರಾದರು. ಎನ್ಎಸ್ಎಸ್ ಸ್ವಯಂಸೇವಕರ ಮತ್ತು ಕಾರ್ಯಕ್ರಮಾಧಿಕಾರಿಯದ ಶ್ರೀಮತಿ ಸವಿತಾ ಎರ್ಮಾಳ್ ಇವರ ಪ್ರಯತ್ನವನ್ನು ಭಕ್ತ ಜನರು ಶ್ಲಾಘಿಸಿದರು. ಹಲವಾರು ಮಂದಿ ಈ ಬೀದಿ ನಾಟಕದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದರು. ಬೆಂಗಳೂರು, ತೀರ್ಥಳ್ಳಿ ಮುಂತಾದ ನಾನಾ ಊರುಗಳಿಂದ ಆಗಮಿಸಿದ್ದ ಜನರು ಬೀದಿ ನಾಟಕವನ್ನು ನೋಡಿ ಆನಂದಿಸಿದರು. ಮತ್ತು ಪ್ರಭಾವಿತರಾದರು ಈ ಬೀದಿ ನಾಟಕವನ್ನು ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಯದ ಹಾಗೂ ಎನ್ಎಸ್ಎಸ್ ನ ಮಂಗಳೂರು ವಿಭಾಗದ ವಿಭಾಗ ಅಧಿಕಾರಿಯಾದ ಶ್ರೀಮತಿ ಸವಿತಾ ಎರ್ಮಾಳ್ ಇವರು ರಚಿಸಿ ನಿರ್ದೇಶಿಸಿದ್ದರು.

Related Articles

Back to top button
error: Content is protected !!