ಶಿಲ್ಪಕಲೆಗಾರ ಶ್ರೀತಿನ್ ಶೆಟ್ಟಿಗಾರರಿಗೆ ಸನ್ಮಾನ

Views: 0
ಕುಂದಾಪುರ : ತಾಲೂಕಿನ ಹಕ್ಲಾಡಿ ಗ್ರಾಮದ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಧಾಮಿ೯ಕ ಸಭಾ ಕಾಯ೯ಕ್ರಮ ಮತ್ತು ಸಾಧಕರಿಗೆ ಸನ್ಮಾನ ನಡೆಯಿತು.
ಇದೇ ಸಂದರ್ಭದಲ್ಲಿ ಕುಂದಾಪುರದ ಹೃದಯ ಭಾಗದಲ್ಲಿ ಶಾಸ್ತ್ರೀಜಿ ಅವರ ಕಂಚಿನ ಪ್ರತಿಮೆಯನ್ನು ರಚಿಸಿದ ಶ್ರೀತಿನ್ ಶೆಟ್ಟಿಗಾರ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧಮ೯ದಶಿ೯ಗಳಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಭವಿಷತ್ತಿನಲ್ಲಿ ತಮ್ಮಿಂದ ಅತ್ತ್ಯುತ್ತಮ ಕಲಾಕೃತಿಗಳು ಮೂಡಿಬರಲಿ ಎಂದರು.
ಇದೇ ಸಂದಭ೯ದಲ್ಲಿ ವಿವಿಧ ಸಾಧಕರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ, ಐರ್ ಬೈಲ್ ಆನಂದ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ , ಎಸ್ಸೆಸ್ಸೆಲ್ಸಿ ಸಾಧಕಿ ಕು, ಶ್ರೀಲಹರಿ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಾಸ್ತು ತಜ್ಞ ಡಾ. ಬಸವರಾಜ್ ಶೆಟ್ಟಿಗಾರ, ನಿವೃತ್ತ ಅರಣ್ಯಾಧಿಕಾರಿ ರಾಜ್ ಗೋಪಾಲ ಶೆಟ್ಟಿ, ದೇವಳದ ಮೊಕ್ತೇಸರರಾದ ಜಯರಾಮ. ಎಸ್. ಹೆಗ್ಡೆ, ಪಾತ್ರಿ ನಾರಾಯಣ ಉಪಸ್ಥಿತರಿದ್ದರು.
ಜಯರಾಮ್. ಎಸ್. ಹೆಗ್ಡೆ ಸ್ವಾಗತಿಸಿದರು. ಚೇತನಾ ಶಾನುಬಾಗ್ ನಿರೂಪಿಸಿರು. ಇದೇ ವೇದಿಕೆಯಲ್ಲಿ ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.






