ಶಿಕ್ಷಣ
ಶಿರೂರು ಜ್ಞಾನದಾ ಶೈಕ್ಷಣಿಕ ಸಂಸ್ಥೆ:ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಒತ್ತಡ ಮತ್ತು ಖಿನ್ನತೆ ಕಾರ್ಯಾಗಾರ
Views: 83
ಕನ್ನಡ ಕರಾವಳಿ ಸುದ್ದಿ: ಶಿರೂರು ಜ್ಞಾನದಾ ಶೈಕ್ಷಣಿಕ ಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಇಲ್ಲಿನ ICTC ಆಪ್ತ ಸಮಾಲೋಚಕಿ ಶ್ರೀಮತಿ ವಾಸಂತಿ ಇವರು ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಒತ್ತಡ, ಖಿನ್ನತೆ,ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು, ಹೆಚ್ ಐ ವಿ, ಲೈಂಗಿಕ ಶಿಕ್ಷಣದ ಜೊತೆಗೆ ಸ್ವಚ್ಛತೆ ಪೌಷ್ಟಿಕ ಆಹಾರ ಸೇವನೆಯ ಕುರಿತು ವಿವಿಧ ಉದಾಹರಣೆ ಯೊಂದಿಗೆ ಅರಿವು ಮೂಡಿಸಿ ಕ್ರಮಬದ್ದವಾದ ವ್ಯಾಯಾಮ, ಮಾನಸಿಕ ಆರೋಗ್ಯ ಯೋಗ ಪ್ರಾಣಾಯಾಮ ಕುರಿತು ತಿಳಿಸಿ ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ,ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು ಶಿಕ್ಷಕಿ ದೇವಕಿ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.














