ಕ್ರೀಡೆ
ವಕ್ವಾಡಿ ಸರ್ಕಾರಿ ಪ್ರೌಢಶಾಲಾ ಬಾಲಕಿಯರ ಕಬಡ್ಡಿ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Views: 460
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ವೃತ್ತ ಮಟ್ಟದ 14ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ವಕ್ವಾಡಿ ಸರಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಕ್ವಾಡಿ ಪ್ರೌಢ ಶಾಲಾ ವಿದ್ಯಾರ್ಥಿನಿ ಆಫಿಯ ಪಂದ್ಯಾಟದ ಉತ್ತಮ ಆಟಗಾರ್ತಿಯಾಗಿ ಮೂಡಿ ಬಂದಿದ್ದಾಳೆ ಹಾಗೂ ತನ್ಯ ಉತ್ತಮ ಹಿಡಿತಗಾರ್ತಿಯಾಗಿ ಪ್ರಶಸ್ತಿ ಪಡೆದಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದಿಸಿದ್ದಾರೆ.