ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್: 20ನೇ ವಾರ್ಷಿಕೋತ್ಸವ ಸಮಾರಂಭ
ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯವಲ್ಲದೆ, ಭವಿಷ್ಯದ ಯಶಸ್ಸಿಗೆ ಅಗತ್ಯವಾದ - ಜೀವನ ಶಿಕ್ಷಣ ನೀಡುತ್ತಿದ್ದೇವೆ. ಹೈನುಗಾರಿಕೆ, ಕೃಷಿ, ಸಾವಯವ ಅಭ್ಯಾಸಗಳ ಜೊತೆ ಅದರ ಬಳಕೆ, ಉಪಯುಕ್ತತೆ ಬಗ್ಗೆಯೂ ತಿಳುವಳಿಕೆ ನೀಡುತ್ತಿದ್ದೇವೆ--- ಅನುಪಮಾ ಎಸ್. ಶೆಟ್ಟಿ, ಬಾಂಡ್ಯ ಎಜುಕೇಷನಲ್ ಟ್ರಸ್ಟ್ ಜಂಟಿ ಆಡಳಿತ ಟ್ರಸ್ಟಿ
Views: 163
ಕನ್ನಡ ಕರಾವಳಿ ಸುದ್ದಿ: ‘ಮಾತೃ ಭಾಷೆಯ -ಬಗ್ಗೆ ಪ್ರೀತಿ, ಅಭಿಮಾನ ಇರಬೇಕು. ಆದರೆ ಬೇರೆ ಭಾಷೆಗಳು ನಮಗೆ ಬೇಡ ಎಂದರ್ಥವಲ್ಲ’ ಎಂದು ರಾಜ್ಯ ಐಎಂಎ -ಉಪಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಹೇಳಿದರು.
ವಕ್ವಾಡಿಯ ಗುರುಕುಲ ಪಬ್ಲಿಕ್ ಕ್ಯಾಂಪಸ್‌ನಲ್ಲಿ ಶನಿವಾರ ಸಂಜೆ ನಡೆದ 20ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ಸರ್ಕಾರದ ವ್ಯವಸ್ಥೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನೋವು ನಲಿವನ್ನು ಸಮಾನವಾಗಿ ತೆಗೆದುಕೊಳ್ಳಬೇಕು. ಅಂಕಗಳೇ ಬದುಕಿನ ಯಶಸ್ಸಿನ ಮೆಟ್ಟಿಲಾಗುವುದಿಲ್ಲ. ನಮ್ಮನ್ನು ಬೆಳೆಸಿದ ಜಗತ್ತಿಗೆ ಏನಾದರೂ ಕೊಡುವ ಹಂಬಲ, ತುಡಿತ ಇರಬೇಕು ಎಂದರು.ಆರ್ಥಿಕ ಕಾರಣಗಳಿಂದ ವಿದ್ಯಾಭ್ಯಾಸಕ್ಕೆ 5 ಬಾರಿ ತೊಡಕಾಗಿದ್ದರೂ ಬದುಕಿನ ಗುರಿ ಕಳೆದುಕೊಂಡಿರಲಿಲ್ಲ. ನಾವು ಸಮಾಜದ ಋಣ ತೀರಿಸುವ ಸಂಕಲ್ಪ ಹೊಂದಿರಬೇಕು. ಸಮಾಜದ ಬೆಂಬಲ ದೊರಕಿದಾಗ ಅದನ್ನು ಸಶಕ್ತಿಯನ್ನಾಗಿ-ಸುವ ಬದ್ಧತೆ ಇರಬೇಕು. ಪ್ರತಿ ವೃತ್ತಿಗೂ ಅದರದ್ದೇ ಆದ ಶ್ರೇಷ್ಠತೆ ಇದೆ ಎಂದು ಹೇಳಿದರು.
ಬಾಂಡ್ಯ ಎಜುಕೇಷನಲ್ ಟ್ರಸ್ಟ್ ಜಂಟಿ ಆಡಳಿತ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಜಂಟಿ ಆಡಳಿತ ಟ್ರಸ್ಟಿ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಪ್ರಾಂಶುಪಾಲೆ ರೂಪಾ ಶೆಣೈ ಭಾಗವಹಿಸಿದ್ದರು.ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರತಿಭಾನ್ವಿತರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಪ್ರಜನ್ಯ ಸ್ವಾಗತಿಸಿದರು. ಪೌರವ ವಿ. ಶೆಟ್ಟಿ ಪರಿಚಯಿಸಿದರು. ಅವನಿ ಸುರೇಶ್ ವಂದಿಸಿದರು. ಪ್ರಥ್ವಿಶ್ ಶೆಟ್ಟಿ, ಅವಿಶಾ ಶೆಟ್ಟಿ ನಿರೂಪಿಸಿದರು. ಪ್ರಾಂಶುಪಾಲೆ ರೂಪಾ ಶೆಣೈ ವರದಿ ಮಂಡಿಸಿದರು. ಶಿಕ್ಷಕರಾದ ಸುಷ್ಮಾ, ರಾಘವೇಂದ್ರ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಿಂದ ‘ಕಲಾ ವೈಭೋಗಂ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.






