ಇತರೆ
ಲೋಕೋಪಯೋಗಿ ಇಲಾಖೆ ನಿವೃತ್ತ ಅಧೀಕ್ಷಕ ವಿಠ್ಠಲ್ ಶೆಟ್ಟಿಗಾರ್ ನಿಧನ
Views: 50
ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಬಸ್ರೂರು ಮೂಲ ನಿವಾಸಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧೀಕ್ಷಕ ವಿಠ್ಠಲ್ ಶೆಟ್ಟಿಗಾರ್ (82) ಜೂನ್ 15ರಂದು ಬೆಂಗಳೂರಿನಲ್ಲಿ ನಿಧನರಾದರು.
ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ವಿಠ್ಠಲ್ ಶೆಟ್ಟಿಗಾರ್ ಅವರು ತೆಕ್ಕಟ್ಟೆಯ ನಿವಾಸಿಯಾಗಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ ಉಡುಪಿ, ಹೊಸಂಗಡಿ, ಕುಂದಾಪುರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಕೋಟೇಶ್ವರ, ಸಾಸ್ತಾನ ಪದ್ಮಶಾಲಿ ಸಮಾಜ ಸೇವಾ ಸಂಘದಲ್ಲಿ ಸಕ್ರಿಯರಾಗಿದ್ದರು.
ಇತ್ತೀಚಿಗೆ ಬೆಂಗಳೂರಿನಲ್ಲಿ ಪುತ್ರಿಯ ನಿವಾಸದಲ್ಲಿ ವಾಸವಾಗಿದ್ದು,ಅಲ್ಲಿಯೇ ಅಸೌಖ್ಯದಿಂದ ನಿಧನರಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಮೃತರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.






