ಸಾಂಸ್ಕೃತಿಕ

ಲಯನ್ಸ್ ಕ್ಲಬ್ ಕೊರ್ಗಿ ಕಾಳಾವರ :ಪದಪ್ರದಾನ ಸಮಾರಂಭ

Views: 0

ಕೋಟೇಶ್ವರ : ಲಯನ್ಸ್ ಕ್ಲಬ್ ಕೊರ್ಗಿ ಕಾಳಾವರ ಇದರ ಪದಪ್ರದಾನ ಸಮಾರಂಭ ಕೋಟೇಶ್ವರದ ಕಂದಾವರ ಅಡಿಟೋರಿಯಂನಲ್ಲಿ ಜುಲೈ 27 ರಂದು ಸಂಜೆ ನಡೆಯಿತು.

ಪದಪ್ರದಾನ ಅಧಿಕಾರಿ ಲಯನ್ಸ್ ದ್ವಿತೀಯ ಉಪ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಅವರು 2023- 24ನೇ ಸಾಲಿನ ನೂತನ ಅಧ್ಯಕ್ಷ ಕೆ. ರತ್ನಾಕರ ಶೆಟ್ಟಿ, ಕಾರ್ಯದರ್ಶಿ ಸುಧೀರ್ ಶೆಟ್ಟಿ,ಕೋಶಾಧಿಕಾರಿ ಸುಖಾನಂದ ಹೆಗಡೆ ಮತ್ತು ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು.

ಸ್ವಪ್ನಾ ಸುರೇಶ್ ಅವರು ಪದಪ್ರದಾನಗೈದು ಮಾತನಾಡಿ, ಸಮಾಜ ಸೇವೆಯಿಂದ ಆತ್ಮ ಸಂತ್ರಪ್ತಿ ನೀಡುವುದಲ್ಲದೆ ನಮ್ಮಲ್ಲಿ ಹುದುಗಿರುವ ಸೂಕ್ತ ಪ್ರತಿಭೆಯನ್ನು ಅಭಿವ್ಯಕ್ತ ಮಾಡಿಕೊಂಡು ನಾಯಕತ್ವ ಗುಣಗಳು ಮತ್ತು ಸ್ನೇಹ ಸಂಬಂಧ ಬೆಳೆಸಲು ಸಹಕಾರಿಯಾಗಿದೆ. ಲಯನ್ಸ್ ಸಂಸ್ಥೆಯ ಸಾಮಾಜಿಕ ಸೇವೆಗಳು ಅಭೂತಪೂರ್ವವಾದದ್ದು, ಉತ್ತಮ ಸೇವೆಯ ಮೂಲಕ ಜಿಲ್ಲೆಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯಬೇಕು ಎಂದು ಕರೆ ನೀಡಿದರು.

ನೂತನವಾಗಿ ಅಧಿಕಾರ ವಹಿಸಿಕೊಂಡ  ಅಧ್ಯಕ್ಷ ಕೆ.ರತ್ನಾಕರ ಶೆಟ್ಟಿ ಅವರು ಮಾತನಾಡಿ, ಸಮಾಜ ಸೇವೆ ಅತ್ಯಂತ ದೊಡ್ಡ ಸೇವೆ. ಸೇವಾ ಮನೋಭಾವದಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿಕೊಳ್ಳಲು ಮತ್ತು ಸಮಾಜ ಸೇವಾ ಕೈಂಕರ್ಯದಲ್ಲಿ ಇನ್ನೂ ಹೆಚ್ಚಾಗಿ ತೊಡಗಿಸಿಕೊಳ್ಳಲು ನಮ್ಮೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ಸಭೆಯಲ್ಲಿ ರೀಜನಲ್ ಚೇರ್ಮನ್ ಧನಪಾಲ ಶೆಟ್ಟಿ, ಝೋನ್ ಚೇರ್ಮನ್ ರಜತ್ ಹೆಗಡೆ, ರೀಜನಲ್ ಸೆಕ್ರೆಟರಿ ಯು.ಎಸ್ ಮೋಹನ ದಾಸ್ ಶೆಟ್ಟಿ,ಜಿಲ್ಲಾ ಮುಖ್ಯ ಕೋ- ಆಡಿನೇಟರ್ ಅರುಣ್ ಕುಮಾರ್ ಹೆಗ್ಡೆ ಲಯನ್ಸ್ ದೀಪಕ್ ಶೆಟ್ಟಿ ಉಪಸ್ಥಿತರಿದ್ದರು.

ಸಂಕೇತ ಶೆಟ್ಟಿ ಮತ್ತು ವೈಭವ ಶೆಟ್ಟಿ ಅವರು ಗವರ್ನರ್ ಮತ್ತು ನೂತನ ಅಧ್ಯಕ್ಷರನ್ನು ಪರಿಚಯಿಸಿದರು.

ರಾಕೇಶ್ ಶೆಟ್ಟಿ ಫ್ಲಾಗ್ ಸೆಲ್ಯೂಟೇಶನ್ ಹಾಗೂ ನಾಗರಾಜ್ ಶೆಟ್ಟಿ ಲಯನ್ಸ್ ಕೋಡ್ ಆಫ್ ಎಥಿಕ್ಸ್ ಬಗ್ಗೆ ಬೋಧಿಸಿದರು.

ಮಾ.ಎ.ಜಿ ಆಶ್ರಿತ್ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ದಿನಕರ ಹೆಗ್ಡೆ ಸ್ವಾಗತಿಸಿದರು. ಜಿಲ್ಲಾ ಮುಖ್ಯ ಕೋ-ಆರ್ಡಿನೇಟರ್ ದಿನಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಧೀರ್ ಶೆಟ್ಟಿ ವಂದಿಸಿದರು.

Related Articles

Back to top button
error: Content is protected !!