ರಾಜಕೀಯ

ರಾಜ್ಯದ ಈ ಟಾಪ್ 5 ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಗೆಲ್ಲೋದು ಯಾರು?

Views: 70

ಬೆಂಗಳೂರು: ರಾಜ್ಯದಲ್ಲಿ ಅತೀ ಹೆಚ್ಚು ಸೀಟು ಗೆಲ್ಲೋದು ನಾವೇ ಎಂದು ಕಾಂಗ್ರೆಸ್ ಹೇಳುತ್ತಿದೆ. ಇನ್ನೊಂದೆಡೆ ಬಿಜೆಪಿ, ಜೆಡಿಎಸ್‌ ಮೈತ್ರಿ ಮೂಲಕ ವಿಧಾನಸಭಾ ಚುನಾವಣೆ ಸೋಲಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿವೆ. ಹೀಗಿರುವಾಗಲೇ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ ಪೈಪೋಟಿ ಟಾಪ್ 5 ಹೈವೋಲ್ಟೇಜ್ ಕ್ಷೇತ್ರಗಳು ಇಲ್ಲಿವೆ.

1. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಸದ್ದು ಮಾಡಿದ ಮೊದಲ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಇದಕ್ಕೆ ಕಾರಣ ಈ ಬಾರಿ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿಕೆ ಸುರೇಶ್‌ ಎದುರು ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿ ಎನ್ ಮಂಜುನಾಥ್ ಸ್ಪರ್ಧೆ ಮಾಡಿರುವುದು. ಸತತ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡ ಡಿಕೆ ಸುರೇಶ್‌ ಅವರಿಗೆ ಡಾ.ಮಂಜುನಾಥ್‌ ಸವಾಲು ಹಾಕಿದ್ದಾರೆ. ಹಾಗಾಗಿ ಇಲ್ಲಿ ಗೆಲ್ಲೋದು ಯಾರು ಅನ್ನೋ ಕುತೂಹಲ ಎಲ್ಎಲರಲ್ಲೂ ಕಾಡಿದೆ.

2. ಹಾಸನ ಲೋಕಸಭಾ ಕ್ಷೇತ್ರ

ರಾಜ್ಯದಲ್ಲಿ ಭಾರೀ ಸದ್ದು ಮಾಡಿರೋ ಮತ್ತೊಂದು ಕ್ಷೇತ್ರ ಹಾಸನ. ಇದಕ್ಕೆ ಕಾರಣ ಮಾಜಿ ಪ್ರಧಾನಿ ದೇವೇಗೌಡ್ರ ಮೊಮ್ಮಗ ಪ್ರಜ್ವಲ್ ರೇವಣ್ಣ ಅಖಾಡದಲ್ಲಿರೋದು. ಇಲ್ಲಿ ಕಾಂಗ್ರೆಸ್‌ನಿಂದ ಶ್ರೇಯಸ್‌ ಪಟೇಲ್‌ ಇದ್ದಾರೆ. ಚುನಾವಣೆ ನಂತರ ಪ್ರಜ್ವಲ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಶ್ರೇಯಸ್ ರೇವಣ್ಣ ವಿರುದ್ಧ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 3 ಸಾವಿರ ವೋಟ್ನಿಂದ ಸೋತಿದ್ದರು. ಹಾಗಾಗಿ ಇದು ಜಿದ್ದಾಜಿದ್ದಿನ ಕಣವಾಗಿದೆ.

3. ಮಂಡ್ಯ ಲೋಕಸಭಾ ಕ್ಷೇತ್ರ

ಬೆಂಗಳೂರು ಗ್ರಾಮಾಂತರ ನಂತರ ಭಾರೀ ಸದ್ದು ಮಾಡಿರುವ ಇನ್ನೋಂದು  ಲೋಕಸಭಾ ಕ್ಷೇತ್ರ ಮಂಡ್ಯ. ಮಂಡ್ಯ ಲೋಕಸಭಾ ಕ್ಷೇತ್ರ ಭಾರತದ ಗಮನ ಸೆಳೆದಿದೆ. ಇದಕ್ಕೆ ಕಾರಣ ಈ ಬಾರಿ ಮಂಡ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣದಲ್ಲಿರುವುದು. ಕಾಂಗ್ರೆಸ್ಸಿನಿಂದ ಸ್ಟಾರ್ ಚಂದ್ರು ಎಂಬ ಉದ್ಯಮಿ ಸ್ಪರ್ಧೆ ಮಾಡಿದ್ದಾರೆ.

4. ದಾವಣಗೆರೆ ಲೋಕಸಭಾ ಕ್ಷೇತ್ರ

ದಾವಣಗೆರೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಇದೆ. ಕಾಂಗ್ರೆಸ್‌ನಿಂದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನ ಕಣಕ್ಕಿಳಿದ್ದಾರೆ. ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ವಿನಯ್‌ ಕುಮಾರ್‌ ಇದ್ದಾರೆ. ಶಾಮನೂರು, ಸಿದ್ದೇಶ್ವರ ಕುಟುಂಬಗಳ ಮಧ್ಯೆ ವಿನಯ್‌ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ.

5. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

ಬಿಜೆಪಿ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ ಅವರನ್ನು ಮಣಿಸಲು ಕಾಂಗ್ರೆಸ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸಿದೆ. ವಿಧಾನಸಭಾ ಚುನಾವನೆ ಸೋತ ಸುಧಾಕರ್‌ ಲೋಕಸಭೆ ಗೆಲ್ಲಲೇಬೇಕು ಎಂದಿದ್ದಾರೆ. ಇತ್ತ ಸ್ಥಳೀಯ ಶಾಸಕರ ಬೆಂಬಲದಿಂದ ಗೆಲ್ಲೋ ನಿರೀಕ್ಷೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ರಕ್ಷಾ ರಾಮಯ್ಯ ಇದ್ದಾರೆ.

Related Articles

Back to top button
error: Content is protected !!