ಮೋದಿ ಸಂಪುಟದಲ್ಲಿ ರಾಜ್ಯದಿಂದ ಸಚಿವ ಸ್ಥಾನ ಯಾರಿಗೆ?

Views: 125
ಈ ಬಾರಿ ಏಕಾಂಗಿಯಾಗಿ ಬಿಜೆಪಿ ಬಹುಮತ ಕ್ರಾಸ್ ಮಾಡಿಲ್ಲ.ಹೀಗಾಗಿ ಮಿತ್ರ ಪಕ್ಷಗಳನ್ನು ಮೋದಿ ಅವಲಂಭಿಸಿದ್ದಾರೆ. ಅವರು ಡಿಮಾಂಡ್ ಗಳಿಗೆ ತಲೆಬಾಗಲೆ ಬೇಕು ಆ ನಿಟ್ಟಿನಲ್ಲಿ ಕರ್ನಾಟಕಕ್ಕೆ ಅಂದುಕೊಂಡದ್ದಕ್ಕಿಂತ ಕಡಿಮೆ ಸಚಿವ ಸ್ಥಾನಗಳು ಸಿಗಲಿವೆ. ಕಳೆದ ಬಾರಿ ನಾಲ್ಕು ಜನ ಸಂಸದರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿತ್ತು. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು 17 + 2 ಒಟ್ಟು 19 ಸ್ಥಾನಗಳನ್ನು ಗೆದ್ದುಕೊಂಡಿವೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕರಾಗಿರುವ ಎಚ್ಡಿ ಕುಮಾರಸ್ವಾಮಿಅವರಿಗೆ ಸಚಿವ ಸ್ಥಾನ ಬಹುತೇಕ ಫಿಕ್ಸ್ ಎನ್ನಲಾಗಿದೆ.ಅವರ ನಿರೀಕ್ಷೆಯಂತೆ ಕೃಷಿ ಖಾತೆ ಸಿಗುವುದು ಕಷ್ಟ ಯಾಕೆಂದರೆ ನಿತೀಶ್ ಕುಮಾರ್ ಕೃಷಿ ಖಾತೆಯನ್ನು ಡಿಮಾಂಡ್ ಮಾಡುವ ಸಾಧ್ಯತೆ ಹೆಚ್ಚು
ಸಂಸದೀಯ ಸಚಿವರಾಗಿರುವ ಕಾರಣ ಹಾಲಿ ಸಚಿವ ಪ್ರಹ್ಲಾದ್ ಜೋಶಿಯೇ ಕ್ಯಾಬಿನೆಟ್ನಲ್ಲಿ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಇನ್ನೂ ಕರ್ನಾಟಕದಲ್ಲಿ ಲಿಂಗಾಯತರಿಗೊಂದು, ಹಿಂದುಳಿದ ವರ್ಗಗಳಿಗೊಂದು ರಾಜ್ಯ ಸಚಿವ ಸ್ಥಾನವನ್ನು ನೀಡಬಹುದು. ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್ ಐದನೇ ಬಾರಿ ಸಂಸದರಾಗಿ ಆಯ್ಕೆ ಆಗಿರುವುದರಿಂದ ಲಿಂಗಾಯತ ಕೋಟಾದಲ್ಲಿ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಪ್ರಭಾವಿ ಲಿಂಗಾಯತ ನಾಯಕರಾದ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಕೂಡ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ. ಶೋಭಾ ಕರಂದ್ಲಾಜೆ ಅವರ ಹೆಸರು ಸಹ ಕೇಳಿ ಬರುತ್ತಿದ್ದು, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಗೋವಿಂದ ಕಾರಜೋಳ ಅವರು ಮೊದಲ ಬಾರಿ ಸಂಸದರಾಗಿದ್ದರೂ ಕೂಡ ಅವರಿಗೆ ರಾಜ್ಯ ರಾಜಕೀಯದಲ್ಲಿ ಅಪಾರ ಅನುಭವ ಇರುವುದರಿಂದ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಎನ್ನಲಾಗಿದೆ.ಆದರೆ ಹಿಂದುಳಿದ ವರ್ಗಕ್ಕೆ ಆಧ್ಯತೆ ಸಿಗುವುದಾದರೆ ಅನುಭವದ ಆಧಾರದ ಮೇಲೆ ಕೋಟ ಶ್ರೀನಿವಾಸ ಪೂಜಾರಿಯವರನ್ನು ಪರಿಗಣಿಸಬಹುದು.
ಮೋದಿ ಕ್ಯಾಬಿನೆಟ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಡಾ. ಸಿ ಎನ್ ಮಂಜುನಾಥ್ ಅವರ ಹೆಸರು ಸಹ ಕೇಳಿ ಬರುತ್ತಿದ್ದು, ಕುಮಾರಸ್ವಾಮಿ ಅವರಿಗೆ ಈ ಬಾರಿ ಅವಕಾಶವನ್ನು ನೀಡಿದ್ರೆ ಕೆಲವು ದಿನ ಕಾಲ ಮಂಜುನಾಥ್ ಅವರು ಕಾಯಬೇಕಾಗಿದೆ ಎನ್ನಲಾಗಿದೆ.
2014 ಮತ್ತು 2019ರಲ್ಲಿ ತಲಾ ಎರಡೆರಡು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ಕರ್ನಾಟಕಕ್ಕೆ ನೀಡಲಾಗಿತ್ತು. ಅದೇ ಫಾರ್ಮುಲಾವನ್ನು ಈ ಬಾರಿಯೂ ಮುಂದುವರಿಸುವ ಸಾಧ್ಯತೆ ಇದೆ. ಒಂದು ಅಥವಾ ಎರಡು ರಾಜ್ಯ ಸಚಿವ ಸ್ಥಾನ ನೀಡಬಹುದು.






