ರಾಜಕೀಯ

ಮುಖ್ಯಮಂತ್ರಿ ಹಾಗೂ ನನ್ನ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ : ಡಿಕೆಶಿ ಆರೋಪ, ಏನಿದು ಭೈರವಿ ಯಾಗ ?

Views: 64

ಬೆಂಗಳೂರು: ರಾಜಕೀಯ ಮುಖಂಡರೊಬ್ಬರು ನನ್ನ ಹಾಗೂ ಸಿಎಂ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ದೆಹಲಿಯಿಂದ ವಾಪಸ್ ಆದ ಬಳಿಕ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ನನ್ನ ಹಾಗೂ ಸಿಎಂ ವಿರುದ್ಧ ದೊಡ್ಡ ಪೂಜೆ ನಡೆಯುತ್ತಿದೆ. ಶತ್ರು ಭೈರವಿ ಯಾಗ ಮಾಡುವ ಮೂಲಕ ಪಂಚ ಬಲಿ ಕೊಟ್ಟಿದ್ದಾರೆ. ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿ ಯಾಗವಾಗಿದೆ. ಯಾಗದಲ್ಲಿ ಮೇಕೆ, ಹಂದಿ, ಕುರಿ, ಬಲಿ ಕೊಟ್ಟಿದ್ದಾರೆ. ಇದನ್ನು ಯಾರು ಮಾಡಿಸಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ಇದರಲ್ಲಿ ಪಾಲ್ಗೊಂಡವರು ನಮಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಕೇರಳದಲ್ಲಿ ಈ ಯಾಗ ನಡೆಯುತ್ತಿದೆ. ಮೇಕೆ 21, ಎಮ್ಮೆ 3, ಕುರಿ 21 ಬಲಿ ಕೊಡುತ್ತಿದ್ದಾರೆ. ಅಘೋರಿಗಳ ಮೂಲಕ ಯಾಗ ಮಾಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ. ಯಾರು ಮಾಡಿಸುತ್ತಿದ್ದಾರೆ ಅಂತ ಗೊತ್ತಿದೆ. ನಮ್ಮ ಮೇಲೆ ಅವರು ಏನೇ ಪ್ರಯೋಗ ಮಾಡಿದರೂ, ನಮ್ಮ ನಂಬಿದ ಶಕ್ತಿ ನಮ್ಮನ್ನು ಕಾಪಾಡುತ್ತದೆ.

ಏನಿದು ಭೈರವಿ ಯಾಗ ?

‘ಭೈರವಿ’ ಅಥವಾ ‘ಭಯರವ’  ಯಾಗವನ್ನು ಮಾಡಲು ಅನೇಕ ನಿಯಮಗಳಿದೆ. ಇದನ್ನ ಬಹಳ ಸುಲಭವಾಗಿ ಸಹ ಮಾಡಲಾಗುವುದಿಲ್ಲ. ಅಷ್ಟಮಿಯ ದಿನ, ಭಾನುವಾರ, ಬುಧವಾರ ಮತ್ತು ಗುರುವಾರದಂತಹ ದಿನಗಳಂದು ಸರಿಯಾದ ಸಮಯದಲ್ಲಿ ಈ ಯಾಗವನ್ನ ಮಾಡಿದರೆ ಅದರ ಫಲಗಳನ್ನು ಪಡೆಯಬಹುದು

ಇದಲ್ಲದೇ, ಜಾತಕದಲ್ಲಿನ ಶನಿ, ರಾಹು ಅಥವಾ ಕೇತುಗಳ ಮಹಾದಶ ಸಮಸ್ಯೆಯನ್ನು ಸೇರಿದಂತೆ ಎಲ್ಲಾ ಸಮಸ್ಯೆಗಳಿದ್ದು ಅದರಿಂದ ಬಹಳ ಕಷ್ಟಗಳನ್ನ ಅನುಭವಿಸುತ್ತಿದ್ದರೆ ಈ ಯಾಗದಿಂದ ಪರಿಹಾರ ಸಿಗುತ್ತದೆ.ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿ ಯಾಗ ಇದಾಗಿದೆ.

Related Articles

Back to top button
error: Content is protected !!