ಮಹಿಳೆಯನ್ನು ತಿಂದು ತೇಗಿದ್ದ ‘ನರಭಕ್ಷಕ’ ಹುಲಿ ಹೊಟ್ಟೆಯಲ್ಲಿ ಕಿವಿಯೋಲೆ, ಕೂದಲು ಪತ್ತೆ!

Views: 169
ಕನ್ನಡ ಕರಾವಳಿ ಸುದ್ದಿ: ಪಂಚಾರಕೊಲ್ಲಿಯಲ್ಲಿ ನರಭಕ್ಷಕನ ಹೆಜ್ಜೆ ಗುರುತು, ಹಾವಳಿ ಬೆಚ್ಚಿ ಬೀಳುವಂತೆ ಮಾಡಿತ್ತು. ಪಂಚರಕೋಲಿ ಅರಣ್ಯಕ್ಕೆ ಕಾಫಿ ಬೀಜ ಸಂಗ್ರಹಕ್ಕೆ ತೆರಳಿದ್ದ ರಾಧ ಎಂಬ ಮಹಿಳೆಯನ್ನ ನರಭಕ್ಷಕ ಹುಲಿ ತಿಂದು ತೇಗಿತ್ತು. ಮಹಿಳೆಯನ್ನ ಕೊಂದಿದ್ದ ಹುಲಿಯನ್ನ ಕಂಡಲ್ಲಿ ಮುಗಿಸಲು ಒತ್ತಾಯ ಮಾಡಿದ್ರು, ಆದ್ರೇ ಅದೇ ನರಭಕ್ಷಕ ಹುಲಿ ಈಗ ಶವವಾಗಿ ಪತ್ತೆಯಾಗಿದೆ
ಈ ಹುಲಿ ಪ್ರಕರಣದ ಮೇಲೆ ಹುಲಿ ಪ್ರೇಮಿಗಳು ಅನುಮಾನ ವ್ಯಕ್ತಪಡಿಸಿದ್ದರು. ಗುಂಡಿಟ್ಟು ಕೊಲ್ಲಲಾಗಿದೆ ಎಂದು ಆರೋಪ ಮಾಡಿದ್ದರು. ಆದ್ರೆ ನರಭಕ್ಷಕ ಹುಲಿ.. ಮತ್ತೊಂದು ಹುಲಿಯ ಜೊತೆಗಿನ ಕಾದಾಟದಲ್ಲಿ ಬಲಿಯಾಗಿದೆ. ಅದರ ಕತ್ತಿನ ಭಾಗದಲ್ಲಿ ಮತ್ತೊಂದು ಹುಲಿ ಕಚ್ಚಿದ್ದು, ಆಳವಾದ ಗುರುತು ಇದೆ ಎಂದು ಕೇರಳ ಅರಣ್ಯ ಇಲಾಖೆ ವರದಿ ನೀಡಿದೆ. ಆದ್ರೆ ಹುಲಿಯ ಮರಣೋತ್ತರ ವೇಳೆ ಹುಲಿ ಹೊಟ್ಟೆಯಲ್ಲಿ ಸಿಕ್ಕ ವಸ್ತುಗಳು ಜನ್ರರನ್ನ ದಂಗಾಗುವಂತೆ ಮಾಡಿದೆ.
ಕಳೆದ ಕೆಲ ದಿನಗಳಿಂದ ಪಂಚಾರಕೋಲಿ ಜನರ ನಿದ್ದೆಗೆಡಿಸಿದ್ದ ನರಭಕ್ಷಕ ಹುಲಿ ಮೃತದೇಹ ಪತ್ತೆಯಾಗಿದೆ.. ಸುಮಾರು ನಾಲ್ಕರಿಂದ ಐದು ವರ್ಷದ ಹೆಣ್ಣು ಹುಲಿ ಎಂದು ಹೇಳಲಾಗ್ತಿದ್ದು, ಮರಣೋತ್ತರ ಪರೀಕ್ಷೆ ವೇಳೆ ವೇಳೆ ಹುಲಿ ಹೊಟ್ಟೆಯಲ್ಲಿ ಮೃತ ಮಹಿಳೆಯ ಕಿವಿಯೋಲೆ ಹಾಗೂ ಕೂದಲು ಪತ್ತೆಯಾಗಿದೆ.






