ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ವಾರ್ಷಿಕ ಸಂಭ್ರಮ ಸಂಪನ್ನ

Views: 31
ಕನ್ನಡ ಕರಾವಳಿ ಸುದ್ದಿ: ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ವಾರ್ಷಿಕ ಸಂಭ್ರಮವು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ಪ್ರದರ್ಶನದೊಂದಿಗೆ ಶನಿವಾರ ಸಂಪನ್ನವಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಜಾತಾ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಅತಿಥಿಯಾಗಿದ್ದ ಶಾಸಕ ಗುರುರಾಜ ಗಂಟಿಹೊಳೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅಭಿವೃದ್ಧಿ ಸಮಿತಿ, ಸಾರ್ವಜನಿಕರು, ಶಿಕ್ಷಕರು ದಾನಿಗಳಿಂದ ಅಗತ್ಯ ಪರಿಕರಗಳನ್ನು ಹೊಂದಿಸಿಕೊಂಡು ನಡೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿ, ಇಲ್ಲಿ ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯ ಆರಂಭಿಸಲು ಪ್ರಯತ್ನಿಸಲಾಗುವುದು ಎಂದರು.
ಇನ್ನೋರ್ವ ಅತಿಥಿ ಹಿರಿಯ ಗುತ್ತಿಗೆದಾರ ಉಪ್ಪಿನಕುದ್ರು ರಾಜೇಶ ಕಾರಂತ ಶಾಲೆಯು ವಿಶಾಲ ನಿವೇಶನವನ್ನು ಹೊಂದಿರುವುದರಿಂದ ಇಲ್ಲಿ ಅಗತ್ಯವಾಗಿರುವ ಸುಸಜ್ಜಿತ, ಬಹೂಪಯೋಗಿ ಕ್ರಿಡಾಂಗಣವನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.
ಶಾಲಾ ಸಂಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಜನಾರ್ದನ ಧ್ವಜಾರೋಹಣಗೈದರು. ಮುಖ್ಯೋಪಾಧ್ಯಾಯ ಎಂ. ಭಾಸ್ಕರ ಮಯ್ಯ ವರದಿ ಓದಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ ಖಾರ್ವಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಬಳೆಗಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಪಟಗಾರ್, ಅಭಿವೃದ್ಧಿ ಸಮಿತಿ ನಿಕಟಪೂರ್ವ ಅಧ್ಯಕ್ಷ ರವಿ ಮಡಿವಾಳ್, ಅನಿತಾ ಆರ್. ಕೆ, ಹಿಂದಿನ ಮುಖ್ಯೋಪಾಧ್ಯಾಯ ಜಿ. ಬಿ. ಭಾಸ್ಕರ, ನಿವೃತ್ತ ಶಿಕ್ಷಕ ಶಂಕರ ಬಿಲ್ಲವ, ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರೇಮಿ ಕ್ರಾಸ್ತಾ, ಸೀತಾ ಜೋಗಿ, ಗ್ರಾಮ ಪಂಚಾಯಿತಿ ಸದಸ್ಯ ಕರುಣಾಕರ ಆಚಾರ್, ವಿದ್ಯಾರ್ಥಿ ನಾಯಕ ಸಂದರ್ಶ, ನಾಯಕಿ ವೈಷ್ಣವಿ, ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.
ಶಾಲೆಯ ವಾರ್ಷಿಕ ಸಂಚಿಕೆ ಪ್ರೇರಣಾ ಬಿಡುಗಡೆಗೊಂಡಿತು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಬಳೆಗಾರ್, ಶಾಲೆಗೆ ನೆರವಿತ್ತ ಜತೀಂದ್ರ ಮರವಂತೆ, ಅಂಬಿಕಾ ಶೆಟ್ಟಿ, ಶಶಿಧರ ಶೆಟ್ಟಿ, ವೆಂಕಟರಮಣ ಖಾರ್ವಿ, ವಿಶ್ವನಾಥ ಶ್ಯಾನುಭಾಗ್, ಸತೀಶ ಪೂಜಾರಿ, ರಾಘವೇಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರಾದ ಸರ್ವೋತ್ತಮ ಭಟ್, ರಿಚರ್ಡ್ ಸಾಲಿನ್ಸ್ ಅವರನ್ನು ಗೌರವಿಸಲಾಯಿತು. ಶಿಕ್ಷಕರಾದ ಹಿತೇಶ ಶೆಟ್ಟಿ ಸ್ವಾಗತಿಸಿದರು. ಶ್ರೀಧರ ಭಟ್ ವಂದಿಸಿದರು. ಚಂದ್ರ ಡಿ, ನಿರೂಪಿಸಿದರು.
ಕ್ರೀಡಾಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಪಠ್ಯ, ಸಹಪಠ್ಯ ವಿಷಯಗಳ ಸಾಧಕರಿಗೆ, ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ತರಗತಿ ಸೌಂದರ್ಯೀಕರಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ರಮೇಶ ನಾಯಕ್ ಸಂಯೋಜನೆಯಲ್ಲಿ ಗಾನ, ನೃತ್ಯ, ವೈಭವ ನಡೆದುವು. ಆಶಾ ನಾಯಕ್, ರಾಮಚಂದ್ರ ದೇವಾಡಿಗ, ಈರವ್ವ, ವಿಶಾಲಾ, ಕುಸುಮಾ ಸಹಕರಿಸಿದರು.