ಮದುವೆಯ ಶಾಸ್ತ್ರ ಮುಗಿಸಿ ಕೆಲವೇ ಗಂಟೆಗಳಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ವರ ಪೈಲಟ್ ಸಾವು,ವಧು ತೀವ್ರ ಗಾಯಗಳೊಂದಿಗೆ ಪಾರು
Views: 123
ಕನ್ನಡ ಕರಾವಳಿ ಸುದ್ದಿ: ಮದುವೆಯ ಶಾಸ್ತ್ರ ಮುಗಿದ ಕೆಲವೇ ಗಂಟೆಗಳ ಅವಧಿಯಲ್ಲಿ ಡೇವ್ ಫಿಜಿ ಹಾಗೂ ಅವರ ಪತ್ನಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಜಾರ್ಜಿಯಾದಲ್ಲಿ ಅಪಘಾತಕ್ಕೆ ಈಡಾಗಿದೆ. ಘಟನೆಯ ತೀವ್ರತೆಗೆ ಪೈಲಟ್ ಡೇವಿಡ್ ಫಿಜಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪತ್ನಿ ತೀವ್ರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇರಳ ಮೂಲದವರಾದ ಇವರು, ಶುಕ್ರವಾರ ಡಾಸನ್ ವಿಲ್ಲೆಯ ದಿ ರೆವರೆ ಕಲ್ಯಾಣ ಮಂಟಪದಲ್ಲಿ, ಪೋಷಕರು, ಸ್ನೇಹತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ವಿವಾಹದ ನಂತರ ದಂಪತಿ ಹೋಟೆಲ್ಗೆ ತೆರಳಲು ಹೆಲಿಕಾಪ್ಟರ್ ಏರಿದ್ದರು. ಆದರೆ, ಮಳೆ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಡಾಸನ್ ವಿಲ್ಲೆಯ ದಟ್ಟ ಅರಣ್ಯದಲ್ಲಿ ಪತನಗೊಂಡಿದೆ.
ಹೆಲಿಕಾಪ್ಟರ್ ಪತನಗೊಂಡಿದ್ದು, ದಟ್ಟಾರಣ್ಯದಲ್ಲಾದರ ಕಾರಣ ಕಾರ್ಯಾಚರಣೆ ನಡೆಸಲು ರಕ್ಷಣಾ ಅಧಿಕಾರಿಗಳು ಹರಸಾಹಸ ಪಟ್ಟರು. ಐದು ಗಂಟೆಗಳ ಕಾಲ ನಡೆಸಿದ ಹುಡುಕಾಟದ ನಂತರ ಬಿದ್ದ ಮರಗಳ ಅಡಿ ಸಿಲುಕಿದ್ದ ನವವಧು ಜೆಸ್ನಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಡೇವ್ ಅವರ ಪತ್ನಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ದೇಹದ ತುಂಬೆಲ್ಲ ತೀವ್ರ ಗಾಯವಾಗಿದೆ. ಅಪಘಾತಕ್ಕೆ ಪ್ರತಿಕೂಲ ಹವಾಮಾನವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಘಟನೆಯ ಕುರಿತು ಅಲ್ಲಿನ ವಾಯುಯಾನ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದು, ಅಪಘಾತದ ಹಿಂದಿನ ನಿಖರ ಕಾರಣವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ






