ಕರಾವಳಿ

ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನ ಇನ್ನೋರ್ವ ಉಪನ್ಯಾಸಕಿ ಸಾವು 

Views: 398

ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ರಚಿತಾ ಕಬ್ರಾಲ್ (43) ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬಲ್ಮಠ ಸಿಎಸ್ ಐ ಚರ್ಚಿನಲ್ಲಿ ಫಾದರ್ ಆಗಿದ್ದ ದಿವಂಗತ ರೆವರೆಂಟ ಹನಿಪಾಲ್ ಕಬ್ರಾಲ್ ಅವರ ಪುತ್ರಿಯಾಗಿದ್ದು, ಕಂಕನಾಡಿಯ ರೋಶನಿ ನಿಲಯ, ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಸೇವೆ ಈ ಹಿಂದೆ ಸೇವೆ ಸಲ್ಲಿಸಿದ್ದರು.

ಇತ್ತೀಚಿಗೆ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ತೀವ್ರ ಮಧುಮೇಹದಿಂದಾಗಿ ಕಿಡ್ನಿ ಫೆಲ್ಯೂರ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.ಇವರಿಗೆ ಪಿಯುಸಿ ಓದುತ್ತಿರುವ  ಪುತ್ರಿ ಇದ್ದಾರೆ.

ವಾರದ ಹಿಂದಷ್ಟೇ ಇದೇ ಕಾಲೇಜಿನಲ್ಲಿ ಉಪನ್ಯಾಸಕಿಯೊಬ್ಬರು ಅನಾರೋಗ್ಯದಿಂದ ಕುಸಿದು ಬಿದ್ದು ಸಾವನಪ್ಪಿದ್ದು, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದಕ್ಕೆ ಶಾಕ್ ನೀಡಿತ್ತು. ಇದೀಗ ಇನ್ನೋರ್ವ ಉಪನ್ಯಾಸಕಿ ಅಕಾಲಿಕ ಸಾವು ಕಂಡಿದ್ದಾರೆ.

Related Articles

Back to top button
error: Content is protected !!