ಕರಾವಳಿ
ಮಂಗಳೂರು: ಮಗುವಿನ ಜೊತೆ ತಾಯಿ ನಾಪತ್ತೆ

Views: 133
ಮಂಗಳೂರು : ಮನೆಯಿಂದ ಹೊರಟ ತಾಯಿ ಮತ್ತು ಮಗು ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕಂಪಾಡಿ ಮೀನಕಳಿಯ ನಿವಾಸಿ ಶ್ವೇತಾ(31) ಹಾಗೂ ಮಗಳು ಇಶಿಕಾ(6) ನಾಪತ್ತೆಯಾದವರು.
ನಿನ್ನೆ(ಮೇ 29 ) ಮಧ್ಯಾಹ್ನ 3 ಗಂಟೆ ಹೊತ್ತಿಗೆ ತಾಯಿ ಮನೆಯಿಂದ ಗಂಡನ ಮನೆ ಕುಳೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ತಾಯಿ ಮಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ಈಗಾಗಲೇ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿ ಮಗಳ ಬಗ್ಗೆ ಮಾಹಿತಿ ಸಿಕ್ಕಿದರೆ ಕೂಡಲೇ ಪಣಂಬೂರು ಪೊಲೀಸರನ್ನು ಸಂಪರ್ಕಿಸಿ 9480805331,0824222053






