ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರೌಢಶಾಲೆ: ಮಕ್ಕಳ ಸಂಸತ್ ಅದಿವೇಶನ

Views: 86
ಕನ್ನಡ ಕರಾವಳಿ ಸುದ್ದಿ: ನಾಯಕ ಎಂದರೆ ದಾರಿಯನ್ನು ತಿಳಿದವನು, ಆ ದಾರಿಯಲ್ಲಿಯೇ ಸಾಗುವವನು ಹಾಗೂ ಆ ದಾರಿಯನ್ನು ತೋರಿಸುವವನು” ಎನ್ನುವ ಮಾತಿನಂತೆ ಮಕ್ಕಳಲ್ಲಿ ನಾಯಕತ್ವ ಗುಣದ ಅರಿವು ಮೂಡಿಸಲು ಹಾಗೂ ವೈಯಕ್ತಿಕ ಜವಾಬ್ದಾರಿಗಳ ನಿರ್ವಹಣೆಯ ಬಗ್ಗೆ ತಿಳುವಳಿಕೆ ಮೂಡಿಸುವ ಸದುದ್ದೇಶದಿಂದ ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಸ್ರೂರು ಇಲ್ಲಿ ಶಾಲಾ ಸಂಸತ್ ಅಧಿವೇಶನವನ್ನು ಹಮ್ಮಿಕೊಳ್ಳಲಾಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡು ನೇಮಕವಾದ ವಿರೋಧ ಪಕ್ಷದ ನಾಯಕಿಯಾದ ಫಾತಿಮಾ ಸದಾಫ್ ಹಾಗೂ ವಿರೋಧಪಕ್ಷದ ಸದಸ್ಯರು ವಿವಿಧ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಸಮರ್ಪಕವಾಗಿ ಆಡಳಿತ ಪಕ್ಷದ ನಾಯಕಿ ಸಂಚಿತಾ ಶೆಟ್ಟಿ ಹಾಗೂ ಆಡಳಿತ ಪಕ್ಷದ ಸದಸ್ಯರುಗಳು ಉತ್ತರಗಳನ್ನು ನೀಡಿದರು.
ಅಧಿವೇಶನದಲ್ಲಿ ಶಾಲಾ ಪ್ರಾಂಶುಪಾಲರಾದ ಮಮತಾ ಪೂಜಾರಿಯವರು ಸ್ಪೀಕರ್ ಆಗಿ ಕಾರ್ಯವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಸಂತೋಷ ಶೆಟ್ಟಿ, ಶೈಕ್ಷಣಿಕ ನಿರ್ದೇಶಕ ಪ್ರಕಾಶ್ ಶೆಟ್ಟಿ ಹಾಗೂ ಆಡಳಿತಾಧಿಕಾರಿ ಆಶಾ ಶೆಟ್ಟಿಯವರು ಮತ್ತು ವಿದ್ಯಾರ್ಥಿಗಳು ಜನಸಾಮಾನ್ಯರನ್ನು ಪ್ರತಿನಿಧಿಸಿದರು.
ವಿಧಾನ ಪರಿಷತ್ ಹಾಗೂ ಲೋಕಸಭೆಯಲ್ಲಿ ನಡೆಯುವ ಕಾರ್ಯಕಲಾಪಗಳ ಚಿತ್ರಣವನ್ನು ಮಕ್ಕಳ ಮುಂದೆ ತರುವ ಮೂಲಕ ಅಧಿವೇಶನದ ಬಗ್ಗೆ ಮಕ್ಕಳಿಗೆ ಅರಿವು ನೀಡಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಶಾಲಾ ಸಂಚಾಲಕ ಸಂತೋಷ್ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳ ತಿಳುವಳಿಕೆ ಹೊಂದಿ ತಮ್ಮ ಲೋಕಜ್ಞಾನವನ್ನು ದಿನದಿಂದ ದಿನಕ್ಕೆ ವೃದ್ಧಿಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಹ ಆಡಳಿತ ಅಧಿಕಾರಿ ಸುಮಂತ್, ಶಿಕ್ಷಕಿಯರಾದ ವನಿತ, ದಿವ್ಯ ಹಾಗೂ ಗಗನ ಕಾರ್ಯಕ್ರಮ ನಿರ್ವಹಿಸಿದರು.