ಇತರೆ

ಪತ್ನಿಯ ಜೊತೆ ಪ್ರಿಯಕರ!..ರೊಚ್ಚಿಗೆದ್ದ ಗಂಡ ಪತ್ನಿಯ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ಕೊಂಡೊಯ್ದ!!

Views: 399

ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ಆನೇಕಲ್ ಬಳಿ ಪತಿಯೋರ್ವ ಮಗಳ ಮುಂದೆಯೇ ತನ್ನ ಪತ್ನಿಯ ತಲೆ ಕಡಿದು, ಬಳಿಕ ರುಂಡದ ಸಮೇತ ಪೊಲೀಸ್ ಠಾಣೆಗೆ ಬಂದ ಭೀಭತ್ಸ ಘಟನೆ ಶನಿವಾರ ಬೆಳಗಿನ ಜಾವ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

ಆನೇಕಲ್ ನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದ್ದು, ಕಾಚನಾಯಕನಹಳ್ಳಿಯ ಶಂಕರ್ (26) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಹೆಬ್ಬಗೋಡಿಯ ಮಾನಸಾ (26) ಕೊಲೆಯಾದ ಮಹಿಳೆ. ಐದು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ದಂಪತಿಗೆ ನಾಲ್ಕು ವರ್ಷದ ಮಗಳಿದ್ದಾಳೆ.

ಆರೋಪಿಯು ಎಂದಿನಂತೆ ಶುಕ್ರವಾರ ಬೊಮ್ಮಸಂದ್ರದ ಕಾರ್ಖಾನೆಯೊಂದರಲ್ಲಿ ರಾತ್ರಿ ಪಾಳಿ ಕೆಲಸ ಮುಗಿಸಿ ಬೆಳಗಿನ ಜಾವ ಮನೆಗೆ ಬಂದಾಗ ಪತ್ನಿಯೊಂದಿಗೆ ಆಕೆಯ ಪ್ರಿಯಕರ ಇರುವುದು ಕಂಡುಬಂದಿದೆ. ಮಹಿಳೆಯ ಪತಿಯನ್ನು ಕಂಡ ತಕ್ಷಣ ಪ್ರಿಯಕರ ಸ್ಥಳದಿಂದ ಪರಾರಿಯಾಗಿದ್ದು, ಇದರ ಬೆನ್ನಲ್ಲೇ ರೊಚ್ಚಿಗೆದ್ದ ಗಂಡ ಪತ್ನಿಯ ರುಂಡ ಕತ್ತರಿಸಿ ಕೊಲೆ ಮಾಡಿದ್ದಾನೆ. ಬಳಿಕ ಕವರ್ನಲ್ಲಿ ತಲೆಯನ್ನು ತುಂಬಿಕೊಂಡು ಬೈಕ್ ನಲ್ಲಿ ಸೂರ್ಯನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ

Related Articles

Back to top button
error: Content is protected !!