ನೀರು ಕೊಟ್ಟು ಮಾನವೀಯತೆ ತೋರಿದ್ದಕ್ಕೆ ಕೈಕಾಲು ಕಟ್ಟಿಹಾಕಿ, ಅತ್ಯಾಚಾರ
Views: 133
ಕನ್ನಡ ಕರಾವಳಿ ಸುದ್ದಿ: ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ಕಾಮುಕನೊಬ್ಬ ಒಬ್ಬಂಟಿ ಮಹಿಳೆಯಿದ್ದ ಮನೆ ಬಳಿ ಬಂದು ಕುಡಿಯಲು ನೀರು ಕೇಳಿದ್ದಾನೆ. ಮಹಿಳೆ ನೀರು ತರಲು ಹೋದಾಗ ಮನೆಯೊಳಕ್ಕೆ ನುಗ್ಗಿ ಮಹಿಳೆಯ ಕೈಕಾಲು ಕಟ್ಟಿಹಾಕಿ, ಚೂರಿ ತೋರಿಸಿ ಹೆದರಿಸಿ ಅತ್ಯಾಚಾರ ನಡೆಸಿದ್ದಾನೆ.
ಶುಕ್ರವಾರ ಮಧ್ಯಾಹ್ನ 3.30ರ ವೇಳೆ ಮನೆ ಬಳಿ ಬಂದ ಆರೋಪಿ ದುಷ್ಕೃತ್ಯ ಎಸಗಿದ್ದಾನೆ. ಸಂತ್ರಸ್ತ (30) ಸರಕಾರದ ಇಲಾಖೆಯೊಂದರ ನೌಕರರಾಗಿದ್ದಾರೆ.
ದುಷ್ಕೃತ್ಯದ ವೇಳೆ ಮಹಿಳೆ ತಾನು ಎಚ್‌ಐವಿ ಸೋಂಕು ಪೀಡಿತೆ ಎಂದು ಹೇಳಿದರೂ ಲೆಕ್ಕಿಸದ ಕಾಮುಕ ಅತ್ಯಾಚಾರ ನಡೆಸಿದ್ದಾನೆ. ಆ ಬಳಿಕ ಮಹಿಳೆಯ ಖಾಸಗಿ ಅಂಗಕ್ಕೆ ಕಬ್ಬಿಣದ ಸಲಾಕೆ ತೂರಿಸಿ ಕ್ರೌರ್ಯ ತೋರಿದ್ದಾನೆ. ಬಳಿಕ ಆಕೆಯ ಕೈಕಾಲನ್ನೂ ಬಿಚ್ಚದೇ ಕಟ್ಟಿಹಾಕಿದ ಸ್ಥಿತಿಯಲ್ಲೇ ಬಿಟ್ಟು ಸ್ಥಳದಿಂದ ತೆರಳಿದ್ದಾನೆ.
ಸಂಬಂಧಿಕರ ಕರೆ ಮಾಡಿದಾಗ ಮಹಿಳೆ ಸಂಪರ್ಕಕ್ಕೆ ಸಿಗದ ಕಾರಣ ಮನೆಗೆ ಧಾವಿಸಿ ಬಂದಿದ್ದಾರೆ. ಆಗ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಮಾಚೆರ್ಲಾ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ವೈದ್ಯರ ಸಲಹೆ ಮೇರೆಗೆ ನರಸರಾವ್ ಪೇಟ ದಾಖಲಿಸಿದ್ದಾರೆ.
ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಮಹಿಳೆಯ ಮನೆಗೆ ತೆರಳಿ ಆರೋಪಿಯ ಬೆರಳಚ್ಚು ಮತ್ತಿತರ ಸಾಕ್ಷ್ಯಗಳನ್ನು ಕಲೆಹಾಕಿದೆ. ಸಿಸಿಟಿವಿ ಪರಿಶೀಲಿಸಿ ಆರೋಪಿಯ ಸೆರೆಗೆ ವಿಶೇಷ ತಂಡ ರಚಿಸಲಾಗಿದೆ.






