ಇತರೆ
ನಾಪತ್ತೆಯಾದ ಸಂಸ್ಕೃತ ಕಾಲೇಜಿನ ಉಪನ್ಯಾಸಕರ ಶವ ಬಾವಿಯಲ್ಲಿ ಪತ್ತೆ
Views: 38
ಕನ್ನಡ ಕರಾವಳಿ ಸುದ್ದಿ: ನಾಪತ್ತೆಯಾದ ಸಂಸ್ಕೃತ ಕಾಲೇಜಿನ ಉಪನ್ಯಾಸಕರೊಬ್ಬರ ಶವ ಮನೆ ವಠಾರದಲ್ಲಿದ್ದ ಬಾವಿಯಲ್ಲಿ ಶನಿವಾರ ಪತ್ತೆಯಾಗಿದೆ.
ಮೃತ ಉಪನ್ಯಾಸಕ, ಗಣಪತಿ ಭಟ್ (55) ಶಿರಸಿ ಮೂಲದವರಾಗಿದ್ದು, ಅವಿವಾಹಿತರಾಗಿದ್ದು, ನಗರದ ಸಂಸ್ಕೃತ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎಂ.ಜಿ.ಎಂ ಕಾಲೇಜಿನ ಬಳಿ ಬಾಡಿಗೆಯಲ್ಲಿ ವಾಸವಾಗಿದ್ದರು.
ಮೃತರು ನಾಪತ್ತೆಯಾದ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಣಪತಿ ಭಟ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಅಗ್ನಿ ಶಾಮಕ ದಳದ ನೆರವಿನಿಂದ ಶವವನ್ನು ಮೇಲಕ್ಕೆತ್ತಲಾಯಿತು. ನಗರ ಪೋಲಿಸ್ ಠಾಣೆಯ ಎಸ್ ಐ ನಾರಾಯಣ, ಗಣೇಶ ಡಿ,ತನಿಖಾ ಸಹಾಯಕಿ ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು
ಸಮಾಜಸೇವಕ ನಿತ್ಯಾನಂದ ಒಳಕಾಡುರವರು ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.






