ಇತರೆ

ನವದೆಹಲಿಯ ಸಂಸತ್ ಭವನದಲ್ಲಿನ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಲು ಕೋಟೇಶ್ವರದ ವಿದ್ಯಾರ್ಥಿನಿ ಆಯ್ಕೆ

Views: 78

ಕನ್ನಡ ಕರಾವಳಿ ಸುದ್ದಿ: ನವದೆಹಲಿಯ ಸಂಸತ್ ಭವನದಲ್ಲಿ ನಡೆಯುವ ಅಂಬೇಡ್ಕರ್ ಜಯಂತಿ ಆಚರಣೆ ಸಮಾರಂಭದಲ್ಲಿ ರಾಷ್ಟ್ರದ ಪ್ರಮುಖರ ಸಮ್ಮುಖದಲ್ಲಿ ಮಾತನಾಡಲು, ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರೌಢ ಶಾಲಾ ವಿಭಾಗದ 9ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ ಮಹಾಲಕ್ಷ್ಮೀ ಸಿ. ಜಿ. ಆಯ್ಕೆಯಾಗಿದ್ದಾಳೆ.

ಈ ಸಮಾರಂಭದಲ್ಲಿ ಭಾಗವಹಿಸಲು ದೇಶದ ನಾನಾ ಭಾಗಗಳಿಂದ ಆಯ್ಕೆಯಾದ 11 ವಿದ್ಯಾರ್ಥಿಗಳಲ್ಲಿ ಈಕೆ ಕರ್ನಾಟಕ ರಾಜ್ಯದ ಏಕೈಕ ಪ್ರತಿನಿಧಿಯಾಗಿದ್ದಾಳೆ. ಇವಳು ಎಸ್. ಜಿ. ಪ್ರಸಾದ್ ರಾವ್ ಮತ್ತು ಪೂರ್ಣಿಮಾ ಪಿ. ರಾವ್ ದಂಪತಿಯ ಪುತ್ರಿ. ಎ. 13ರಂದು ನವದೆಹಲಿಗೆ ತೆರಳುತ್ತಿರುವ ಮಹಾಲಕ್ಷ್ಮಿಗೆ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಅಧ್ಯಾಪಕ ವೃಂದ, ಸಿಬಂದಿಗಳು, ಎಸ್ ಡಿ ಎಮ್ ಸಿ ಸದಸ್ಯರು ಹಾಗೂ ಸ್ನೇಹಿತರು ಶುಭ ಕೋರಿದ್ದಾರೆ.

Related Articles

Back to top button
error: Content is protected !!