ಶಿಕ್ಷಣ

ನನ್ನ ಸಾವಿಗೆ ಇವರೇ… ಕಾರಣ ಎಂದು ಡೆತ್ ನೋಟ್ ಬರೆದು ಅತಿಥಿ ಉಪನ್ಯಾಸಕ ನಾಪತ್ತೆ!

Views: 213

ಕನ್ನಡ ಕರಾವಳಿ ಸುದ್ದಿ: ಅತಿಥಿ ಉಪನ್ಯಾಸಕರೊಬ್ಬರು ಡೆತ್ ನೋಟ್ ಬರೆದು ವಾಟ್ಸಾಪ್ ಗ್ರೂಪ್‌ ನಲ್ಲಿ ಹಾಕಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಪ್ರಕರಣ ಚಿಕ್ಕೋಡಿಯಲ್ಲಿ ನಡೆದಿದೆ.

ಚಿಕ್ಕೋಡಿಯ ಎಸ್‌ಬಿಐ ಕಾಲನಿಯ ನಿವಾಸಿ ಡಾ. ನೇಮಿನಾಥ ಬಸವಣ್ಣಿ ತೆಪಕೇರಿ ನಾಪತ್ತೆಯಾದ ಅತಿಥಿ ಉಪನ್ಯಾಸಕ, ನಿಪ್ಪಾಣಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದ ಡಾ.ನೇಮಿನಾಥ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಪತ್ರ ಬರೆದಿದ್ದಾರೆ.

ಡೆತ್ ನೋಟ್ ನಲ್ಲಿ ಏನಿದೆ?

“ನಾನು ಆತ್ಮ ಬಲಿದಾನಕ್ಕೆ ಸಿದ್ದವಾಗಿದ್ದೇನೆ. ನನ್ನ ಸಾವಿಗೆ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರೇ ಹೊಣೆಗಾರರು,” ಎಂದು ಬರೆದಿದ್ದಾರೆ. ನನ್ನ ಬಂಧು-ಮಿತ್ರರಿಗೆ ಜಯವಾಗಲಿ, ಕ್ಷಮೆ ಇರಲಿ ಮುದ್ದು ಮಗಳೆ, ಅಮ್ಮನ ಜತೆಗೆ ಖಷಿಯಾಗಿರು, ನಿಮ್ಮಪ್ಪ ಮತ್ತೆ ಹುಟ್ಟಿ ಬರುತ್ತಾನೆ,” ಎಂದು ರಾಜ್ಯಮಟ್ಟದ ಅತಿಥಿ ಉಪನ್ಯಾಸಕರ ವಾಟ್ಸಾಪ್ ಗ್ರೂಪ್‌ನಲ್ಲಿ ಸೆ. 29ರಂದು ಪತ್ರ ಬರೆದು ಹಾಕಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಈ ಕುರಿತು ಡಾ. ನೇಮಿನಾಥ ಅವರ ಸಹೋದರ ಚಿಕ್ಕೋಡಿ ಠಾಣೆಯಲ್ಲಿ ಸೆ. 30ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Back to top button
error: Content is protected !!