ಇತರೆ

ದಿಲ್ಲಿ ಕಾರು ಸ್ಪೋಟಿಸಿ 13 ಜನರ ಸಾವಿಗೆ ಕಾರಣನಾದ ಸ್ಫೋಟದ ರೂವಾರಿ ಉಗ್ರನ ಮನೆ ಧ್ವಂಸ

Views: 112

ಕನ್ನಡ ಕರಾವಳಿ ಸುದ್ದಿ: ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಬಳಿ ಕಾರು ಸ್ಪೋಟಿಸಿ 13 ಜನರ ಸಾವಿಗೆ ಕಾರಣನಾದ ಡಾ. ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ಉನ್-ನಬಿಯ ಕಾಶ್ಮೀರದ ಮನೆಯನ್ನು ಭದ್ರತಾ ಪಡೆಗಳು ನೆಲಸಮಗೊಳಿಸಿವೆ. ಶುಕ್ರವಾರ ಮುಂಜಾನೆ, ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಈತನ ಮನೆಯನ್ನು ಕೆಡಹುವ ಕಾರ್ಯವನ್ನು ಭದ್ರತಾ ಪಡೆಗಳ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು.

ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಉಮರ್, ಕೆಂಪು ಕೋಟೆ ಬಳಿಯ ನೇತಾಜಿ ಸುಭಾಷ್ ಮಾರ್ಗದಲ್ಲಿರುವ ಟ್ರಾಫಿಕ್ ಸಿಗ್ನಲ್ ಬಳಿ ತಾನು ಚಲಾಯಿಸು ತ್ತಿದ್ದ ಹುಂಡೈ ಐ20 ಕಾರನ್ನು ಅದರಲ್ಲಿದ್ದ ಭಾರಿ ಸ್ಪೋಟಕ ಸಾಮಗ್ರಿಯ ಮೂಲಕ ಬ್ಲಾಸ್ಟ್ ಮಾಡಿದ್ದ. ಸ್ಪೋಟದ ಸ್ಥಳದಲ್ಲಿ ಕಂಡು ಬಂದ ಮತ್ತು ಅವನ ತಾಯಿಯಿಂದ ಸಂಗ್ರಹಿಸಲಾದ ಡಿಎನ್ಎ ಮಾದರಿಗಳು ಹೊಂದಾಣಿಕೆಯಾಗಿದ್ದು, ಕಾರಿನಲ್ಲಿ ಅವನೇ ಇದ್ದುದು ದೃಢಪಟ್ಟಿದೆ.ಕಾಶ್ಮೀರದಲ್ಲಿರುವ ಉಮರ್‌ನ ಮನೆಯನ್ನು ಧ್ವಂಸಗೊಳಿಸಿರುವುದು ಭಾರತದ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವವರಿಗೆ ಕಠಿಣ ಸಂದೇಶ ಕಳುಹಿಸುವ ಗುರಿಯನ್ನು ಹೊಂದಿದೆ. ಇದಕ್ಕೂ ಮೊದಲು, ಪಹಲ್ದಾಮ್ ಭಯೋತ್ಪಾದಕ ದಾಳಿಯ ಸಂಚಿನಲ್ಲಿ ಭಾಗಿ ಯಾಗಿರುವವರ ವಿರುದ್ಧವೂ ಈ ಧ್ವಂಸ ಕ್ರಮ ಕೈಗೊಳ್ಳಲಾಗಿತ್ತು.

ದೆಹಲಿ ಸ್ಫೋಟಕ್ಕೂ ಮುನ್ನವೇ ಸುಮಾರು 2,900 ಕೆಜಿ ಬಾಂಬ್ ತಯಾರಿಸುವ ಸಾಮಗ್ರಿಗಳು ಮತ್ತು ಅಸಾಲ್ ರೈಫಲ್‌ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಈ ಉಗ್ರರ ವಶದಲ್ಲಿದ್ದುದು ಪತ್ತೆಯಾಗಿವೆ. ಉಮರ್ ಮತ್ತು ಅವನ ವೈದ್ಯ ಸಹಚರರಾದ ಮುಜಮ್ಮಿಲ್ ಮತ್ತು ಶಾಹೀನ್ ಸಯೀದ್ ಅವರಿಂದ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ವೈದ್ಯರು ಈಗ ಬಂಧನದಲ್ಲಿದ್ದಾರೆ. ಫರಿದಾಬಾದ್‌ನಲ್ಲಿ ಸ್ಫೋಟ ಕಗಳನ್ನು ಸಂಗ್ರಹಿಸಿರುವ ಹಿಂದಿನ ಪಿತೂರಿಯನ್ನು ಬಯಲು ಮಾಡಲು ಅವರನ್ನು ಪ್ರಶ್ನಿಸಲಾಗುತ್ತಿದೆ. ಜೈಶೆ ಮೊಹಮ್ಮದ್ ಮತ್ತು ಅನ್ಸ‌ರ್ ಘಜ್ಜತ್ ಉಲ್ ಹಿಂದ್ ಸಂಘಟನೆಗಳ ಪರವಾಗಿ ದೇಶದಲ್ಲಿ ದೊಡ್ಡ ಮಟ್ಟದ ದಾಳಿಯನ್ನು ನಡೆಸಲು ಸಂಚು ರೂಪಿಸಲಾಗಿತ್ತು. 32 ಕಾರುಗಳಲ್ಲಿ ಸ್ಪೋಟಕಗಳನ್ನು ತುಂಬಿಕೊಂಡು ಹೋಗಿ ಡಿಸೆಂಬರ್ 6ರಂದು ದೇಶದ ನಾನಾ ಭಾಗಗಳಲ್ಲಿ ಸ್ಫೋಟ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಫರಿದಾಬಾದ್‌ನಲ್ಲಿ ಸ್ಪೋಟಕಗಳ ಪತ್ತೆ ಮತ್ತು ದೆಹಲಿಯಲ್ಲಿ ನಡೆದ ಮಾರಕ ಸ್ಪೋಟವು ಜೈಶೆ ಮೊಹಮ್ಮದ್‌ನಂತಹ ಸಂಘಟ ನೆಗಳು ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ವೈದ್ಯರಂತಹ ಉನ್ನತ ಶಿಕ್ಷಣ ಪಡೆದ ವೃತ್ತಿಪರರನ್ನು ನೇಮಿಸಿಕೊಳ್ಳುತ್ತಿರುವುದನ್ನು ಬಹಿರಂಗಪಡಿಸಿದೆ

Related Articles

Back to top button
error: Content is protected !!