ಶಿಕ್ಷಣ

ತಾಯಿ ಮಗಳ ಮಧ್ಯೆ ಜಗಳ ವಿಕೋಪಕ್ಕೆ ತಿರುಗಿ ಮಗಳ ಕೊಲೆಯಲ್ಲಿ ಅಂತ್ಯ!

Views: 301

ಬೆಂಗಳೂರು: ತಾಯಿ ಮಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ತಾಯಿ ಹಾಗೂ ಮಗಳು ಪರಸ್ಪರ ಚಾಕುವಿನಿಂದ ಇರಿದುಕೊಂಡ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಗಳು ಸಾಹಿತಿ (18) ತಾಯಿಯಿಂದಲೇ ಕೊಲೆಯಾದವಳು

ಸಾಹಿತಿ ಪಿಯುಸಿ ಚೆನ್ನಾಗಿಯೇ ಓದುತ್ತಿದ್ದಳು. ಆದರೆ ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ. ಎರಡು ವಿಷಯಕ್ಕೆ ಸಾಹಿತಿ ಹಾಜರಾಗಲಿಲ್ಲ ಹೀಗಾಗಿ ಫಲಿತಾಂಶ ಫೇಲ್ ಅಂತಾ ಬಂದಿದೆ. ಇದರಿಂದ ಮಗಳನ್ನು ಓದಿಸುತ್ತಿದ್ದ ಪದ್ಮಜಾ ಮಗಳು ಒಳ್ಳೆ ಮಾರ್ಕ್ ತೆಗೆಯಬೇಕು ಅಂತಾ ಆಸೆ ಪಟ್ಟಿದ್ದರು. ಆದ್ರೆ ರಿಸಲ್ಟ್ ಫೇಲ್ ಆಗಿತ್ತು. ಇದೇ ವಿಚಾರವಾಗಿ ತಾಯಿ ಪದ್ಮಜಾ ಮಗಳು ಸಾಹಿತಿ ನಡುವೆ ಆಗಾಗ ಜಗಳ ನಡೀತಿತ್ತು.

ಹೀಗೆ ನಿನ್ನೆ ರಾತ್ರಿ ತಾಯಿ ಮಗಳ ಮಧ್ಯೆ ಜಗಳ ಶುರುವಾಗಿದೆ. ಇದೇ ವೇಳೆ ಆಗ ಈ ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ತಾಯಿ ಹಾಗೂ ಮಗಳ ಚಾಕುವಿನಿಂದ ಇರಿದು ಕೊಂಡಿದ್ದಾರೆ. ಪರಿಣಾಮ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಪ್ರಾಣಪಾಯದಿಂದ ಪಾರಾಗಿದ್ದಾಳೆ. ಸದ್ಯ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಬಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!