ರಾಜಕೀಯ

ಡಿಎಂಕೆ ವಿಜಯೋತ್ಸವ ವೇಳೆ ಅತಿರೇಕದ ವರ್ತನೆ: ಮೇಕೆಯ ತಲೆಗೆ ಅಣ್ಣಾಮಲೈ ಫೋಟೊ ಅಂಟಿಸಿ ಕಡಿದ ಕಾರ್ಯಕರ್ತರು!

Views: 112

ಚೆನ್ನೈ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಕೊಯಮತ್ತೂರು ಕ್ಷೇತ್ರದಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಕಣಕ್ಕೆ ಇಳಿದು ಕಾರ್ಯಕರ್ತರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದರು. ಪ್ರಬಲ ಪೈಪೋಟಿ ಒಡ್ಡಿದ್ದ ಅವರು ಕೊನೆಗೆ ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಇದೀಗ ಡಿಎಂಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ವೇಳೆ ಅಣ್ಣಾಮಲೈ ವಿರುದ್ಧ ಅತಿರೇಕದ ವರ್ತನೆ ತೋರಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ ಜತೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಡಿಎಂಕೆ ಕಾರ್ಯಕರ್ತರು ಮೇಕೆಯ ತಲೆಗೆ ಅಣ್ಣಾಮಲೆ ಅವರ ಫೋಟೊ ತೂಗು ಹಾಕಿ ಬಳಿಕ ಅದರ ತಲೆ ಕಡಿಯುವ ವಿಡಿಯೊ ಇದಾಗಿದ್ದು, ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ರಸ್ತೆಯಲ್ಲಿ ನೆತ್ತರು ಚೆಲ್ಲಿದ್ದು, ವಿಕೃತಿ ಮೆರೆದ ಡಿಎಂಕೆ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Related Articles

Back to top button
error: Content is protected !!