ಶಿಕ್ಷಣ

ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Views: 73

ಕನ್ನಡ ಕರಾವಳಿ ಸುದ್ದಿ: ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ನಾಡಿನ ಹಿರಿಮೆ ಗರಿಮೆಯ ಸಂಕೇತವಾದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಬಾಂಡ್ಯಾ ಎಜುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಯತ ಕೆ. ಸುಭಾಶ್ಚಂದ್ರ ಶೆಟ್ಟಿ ಯವರು ಭುವನೇಶ್ವರಿದೇವಿಗೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣಗೈದು ಮಾತನಾಡುತ್ತಾ, ಕನ್ನಡದ ನೆಲ ಜಲದ ಬಗ್ಗೆ ಕನ್ನಡ ಭಾಷೆಯನ್ನಾಡುವ ಮತ್ತು ಅದನ್ನು ಉಳಿಸುವ ಬದ್ಧತೆ ನಮಗಿದ್ದು, ಭಾಷೆಯ ಕುರಿತಾದ ಕೀಳರಿಮೆಯನ್ನು ಮೆಟ್ಟಿನಿಂತು ನಮ್ಮ ನಾಡಿನ ಸಂಸ್ಕೃತಿಯ ದ್ಯೋತಕವಾದ ಕನ್ನಡ ಭಾಷೆಯನ್ನು ಬೆಳೆಸಬೇಕೆಂದರು.

ಮುಖ್ಯ ಅತಿಥಿ ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಅವರು ಮಾತನಾಡುತ್ತಾ, ಕನ್ನಡ ಬಹುಭಾಷಾ ಕುಟುಂಬವಾಗಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಬೇರೆ ಬೇರೆ ಪ್ರಭೇದಗಳನ್ನು ನಾವು ಕಾಣಬಹುದು. ಇದು ಈ ನೆಲದ ಸಿರಿವಂತಿಕೆಯನ್ನು ಜಗತ್ತಿಗೆ ಸಾದರಪಡಿಸುವ ವಿಚಾರವಾಗಿದೆ. ನಮ್ಮ ಹುಟ್ಟಿನ ಮೊದಲ ಮಾತೇ ಕನ್ನಡವಾಗಿರುವಾಗ ಅದರ ಶ್ರೇಷ್ಠತೆಯನ್ನು ಸರ್ವರೂ ಒಪ್ಪಿ ಕಾಪಾಡಬೇಕಾದ ಅಗತ್ಯತೆ ಇದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರೂಪಶಣೈ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಜೀವ ಭಾಷೆಯಾದ ಕನ್ನಡವನ್ನು ಒಗ್ಗೂಡಿ ಕಟ್ಟುವುದಲ್ಲದೆ, ಪರಭಾಷಿಕರಿಗೂ ಕನ್ನಡ ಭಾಷೆಯ ಮಹತ್ವವನ್ನು ಪರಿಚಯಿಸಿ ನಾಡಿನ ಸಂಸ್ಕೃತಿ ಉಳಿಯುವಂತೆ ಮಾಡಬೇಕೆಂದರು. ಕಾಲೇಜಿನ ವಿದ್ಯಾರ್ಥಿನಿಯರು ಕನ್ನಡ ಗೀತೆಗಳು ಹಾಡಿದರು. ವಿದ್ಯಾರ್ಥಿನಿ ಕೆ.ತೇಜಸ್ವಿನಿ ಕಾರ್ಯಕ್ರಮವನ್ನು ನಿರ್ವಹಿಸಿದ್ದು, ವಿದ್ಯಾರ್ಥಿನಿ ತೇಜಸ್ವಿನಿ ಹಲಕರ್ಣಿ ಮಠ ಸ್ವಾಗತಿಸಿದರು. ವಿದ್ಯಾರ್ಥಿನಿ ಶಿಲ್ಪಾ ವಿ ವಂದಿಸಿದರು.

Related Articles

Back to top button
error: Content is protected !!