ಇತರೆ
ಕೋಟೇಶ್ವರದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಮನೆಯ ಮಹಡಿಯಿಂದ ಕಾಲು ಜಾರಿ ಬಿದ್ದು ಸಾವು
Views: 226
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರದಲ್ಲಿ ಮನೆಯ ಮಹಡಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಬ್ರಹ್ಮಾವರದ ಪೇತ್ರಿ ನಿವಾಸಿ ಸತೀಶ ವಿ.(53) ಮೃತಪಟ್ಟವರು.
ಅವರು ಕೋಟೇಶ್ವರದಲ್ಲಿ ಮನೆಯೊಂದರ ಮೇಲಿನ ಮಹಡಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದಾಗ ಅಟ್ಟಣಿಗೆಯಿಂದ ಕಾಲು ಜಾರಿ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






