ಇತರೆ

ಕುಂದಾಪುರ: ಹೂವಿನಕೆರೆಯಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Views: 245

ಕನ್ನಡ ಕರಾವಳಿ ಸುದ್ದಿ : ಕುಂದಾಪುರ ತಾಲೂಕಿನ ಅಸೋಡು ಗ್ರಾಮದ ಹೂವಿನಕೆರೆಯಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಕಾಲು ಜಾರಿ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. 

ಝಾರ್ಖಂಡ್ ರಾಜ್ಯ ಮೂಲದ ಕಾರ್ಮಿಕ ಜಯಂತ (19) ಮೃತಪಟ್ಟವರು.

ನ.7ರ ಮಧ್ಯಾಹ್ನ ಕಟ್ಟಡದ ಪಿಲ್ಲರ್‌ನ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿತ್ತು. ಮಧ್ಯಾಹ್ನ ಊಟದ ವಿರಾಮದ ವೇಳೆ ಮತ್ತೆ ಮೇಲೆ ಹೋಗಿ ಬರುವುದಾಗಿ ಹೇಳಿ ಮೆಟ್ಟಿಲು ಹತ್ತಿ ಹೋಗಿದ್ದರು. ಕಾಮಗಾರಿಯ ಸಂದರ್ಭ ಮೆಟ್ಟಿಲಿನ ಮೇಲೆ ನೀರು ಬಿದ್ದಿದ್ದ ಕಾರಣ ಜಯಂತ ಅವರು ಕಾಲು ಜಾರಿ ಬಿದ್ದಿದ್ದಾರೆ. ಕೈಯ ಮೂಳೆ ಮುರಿತ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಕೋಟೇಶ್ವರದ ಆಸ್ಪತ್ರೆಗೆ ಸೇರಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸಹೋದರ ರಾಕೇಶ ಬಾಗವಾಯಿ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!