ಇತರೆ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಬಳಿ ನಿಲ್ಲಿಸಿದ್ದ ಲಾರಿಯಲ್ಲಿ ಚಾಲಕನ ಶವ ಪತ್ತೆ

Views: 277

ಕನ್ನಡ ಕರಾವಳಿ ಸುದ್ದಿ: ತ್ರಾಸಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಗಂಗೊಳ್ಳಿ ಪೊಲೀಸ್ ಠಾಣೆ ಎದುರಿನ ಫೈ ಓವರ್‌ನಲ್ಲಿ  ನಿಲ್ಲಿಸಿದ್ದ ಲಾರಿಯಲ್ಲಿ ಚಾಲಕನ ಮೃತದೇಹ ಪತ್ತೆಯಾಗಿದೆ.

ಮೃತರನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಾಳಿದಾಸ ನಗರದ ಅಂಜುಮನ್ ಶಾದಿ ಮಹಲ್ ಬಳಿಯ ನಿವಾಸಿ ಮನ್ಸೂರ್ ಅಲಿ ಸಾಹೇಬ್ (50) ಎಂದು ಗುರುತಿಸಲಾಗಿದೆ. ಅವರು ಎದೆ ನೋವು ಅಥವಾ ಇನ್ನು ಯಾವುದೋ ಅನಾರೋಗ್ಯದ ಕಾರಣದಿಂದ ಮೃತ ಪಟ್ಟಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಅವರು ನ. 6ರ ರಾತ್ರಿ ವೀರಭದ್ರೇಶ್ವರ ಲಾರಿಯಲ್ಲಿ ಮಂದಾರ್ತಿಯ ಕಾರ್ಖಾನೆಗೆ ತೌಡು ಸಾಗಾಟ ಮಾಡಿಕೊಂಡು ಬರುತ್ತಿದ್ದರು. ನಿಗದಿತ ಸಮಯಕ್ಕೆ ಬಾರದೇ ಇದ್ದಾಗ ಕಾರ್ಖಾನೆ ಕಡೆಯಿಂದ ಸಿದ್ದಾರ್ಥ ಎಂಬವರು ದಾವಣಗೆರೆಯ ಸರಕು ಪೂರೈಸುವ ಸಂಸ್ಥೆಗೆ ಕರೆ ಮಾಡಿದರು. ಬಳಿಕ ಅವರು ಹುಡುಕಾಟ ನಡೆಸಿದಾಗ ಲಾರಿ ತ್ರಾಸಿ ಸಮೀಪದ ಹೆದ್ದಾರಿಯಲ್ಲಿ ಪತ್ತೆಯಾಗಿತ್ತು. ಚಾಲಕನ ಶವ ಕೂಡ ಪತ್ತೆಯಾಗಿತ್ತು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!