ಇತರೆ
ಕುಂದಾಪುರ: ಪಾಕಶಾಸ್ತ್ರ ಪ್ರವೀಣ ಕಟ್ಕೆರೆ ಮಹೇಶ್ ಭಟ್ ನಿಧನ
Views: 220
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕಟ್ಕೆರೆ ನಿವಾಸಿ ಮಹಾಬಲೇಶ್ವರ ಭಟ್ ಅವರ ಪುತ್ರ ಮಹೇಶ ಭಟ್ (45) ಮಾ. 21 ರಂದು ನಿಧನರಾದರು.
ಮೃತರು ಕಟ್ಕೆರೆ ಫ್ರೆಂಡ್ಸ್ ವಾಲಿಬಾಲ್ ತಂಡ, ಯುವಶಕ್ತಿ ಯುವಕ ಮಂಡಲ ಕಟ್ಟೆರೆಯ ಪದಾಧಿಕಾರಿಯಾಗಿದ್ದರಲ್ಲದೆ ರಂಗಕಲಾವಿದರಾಗಿ, ಪಾಕಶಾಸ್ತ್ರ ಪ್ರವೀಣರಾಗಿ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ಶಾಸಕ ಕಿರಣ್ ಕುಮಾರ್ ಕೊಡ್ಡಿ ಸಹಿತ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.






