ಕುಂದಾಪುರ: ಕೋಟೇಶ್ವರದಲ್ಲಿ ಲಾರಿ-ಬೈಕ್ ಡಿಕ್ಕಿ; ಸವಾರ ಸಾವು
Views: 451
ಕನ್ನಡ ಕರಾವಳಿ ಸುದ್ದಿ: ಬೈಕಿಗೆ ಹಿಂದಿನಿಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕೊಟೇಶ್ವರದ ಕಿನಾರ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುರುವಾರ ಸಂಭವಿಸಿದೆ.
ಇಡೂರು ಕುಂಜಾಡಿ ಗ್ರಾಮದ ಜನ್ನಾಲು ಕೊಳ್ತಾ ನಿವಾಸಿ ಆನಂದ ಶೆಟ್ಟಿ ಅವರ ಮಗ ಭರತ್ ಶೆಟ್ಟಿ (33) ಮೃತಪಟ್ಟವರು.
ಕೋಟೇಶ್ವರ ಸಮೀಪದ ಪೈಂಟಿಂಗ್ ಅಂಗಡಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಭರತ್ ಕೆಲಸದ ನಿಮಿತ್ತ ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಬಾಲ ಮುರುಗನ್ ಚಲಾಯಿಸುತ್ತಿದ್ದ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ.ಅಪಘಾತದ ಪರಿಣಾಮ ಭರತ್ ರಸ್ತೆಗೆ ಬಿದ್ದಿದ್ದರು. ಚಿಕಿತ್ಸೆಗಾಗಿ ಹತ್ತಿರದ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ, ಮೃತ ಪಟ್ಟಿರುವುದಾಗಿ ದೃಢೀಕರಿಸಿದ್ದಾರೆ. ಭರತ್ ಶೆಟ್ಟಿ ಅವರಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದು,ಪತ್ನಿ ಹಾಗೂ ಕುಟುಂಬದವರನ್ನು ಅಗಲಿದ್ದಾರೆ. ಕುಂದಾಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






