ಶಿಕ್ಷಣ

ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ‘ಸೈಬರ್ ಕ್ರೈಮ್ ತಡೆ ‘ ಉಪನ್ಯಾಸ

'ಸಾಮಾಜಿಕ ಜಾಲತಾಣಗಳ ಸ್ನೇಹ ಸಂಪರ್ಕಗಳ ಬಗ್ಗೆ ಎಚ್ಚರವಹಿಸಿ ಸೈಬರ್ ಮೋಸಜಾಲಕ್ಕೆ ಬಲಿಪಶುಗಳಾಗಬೇಡಿ'------- ಶ್ರೀ ನಂಜಾ ನಾಯ್ಕ,  ಕುಂದಾಪುರ ಟೌನ್ ಪೊಲೀಸ್ ಠಾಣಾಧಿಕಾರಿ

Views: 11

ಕನ್ನಡ ಕರಾವಳಿ ಸುದ್ದಿ: “ಪ್ಲೇಸ್ಟೋರ್ ನಿಂದ ಯಾವುದೇ ಆ್ಯಪ್ ಡೌನ್ಲೋಡ್ ಮಾಡುವಾಗ ವೈಯುಕ್ತಿಕ ಮಾಹಿತಿ ಮತ್ತು ಪಾಸ್ ವರ್ಡ್ ನೀಡುವಲ್ಲಿ‌ ನಾವು ಜಾಗರೂಕರಾಗಿರಬೇಕು. ಸಾಮಾಜಿಕ ಜಾಲತಾಣಗಳ ಸ್ನೇಹ ಸಂಪರ್ಕಗಳ ಬಗ್ಗೆ ಎಚ್ಚರವಹಿಸಿ ಸೈಬರ್ ಮೋಸಜಾಲಕ್ಕೆ ಬಲಿಪಶುಗಳಾಗದಂತೆ ನೋಡಿಕೊಳ್ಳಬೇಕು” ಎಂದು ಕುಂದಾಪುರದ ಆರ್.ಎನ್.‌ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ‘ ಸೈಬರ್ ಕ್ರೈಮ್ ತಡೆಗಟ್ಟುವಿಕೆ ವಿಷಯಾಧಾರಿತ ಕಾರ್ಯಕ್ರಮದಲ್ಲಿ ಕುಂದಾಪುರ ಟೌನ್ ಪೊಲೀಸ್  ಠಾಣಾಧಿಕಾರಿ ಶ್ರೀ ನಂಜಾ ನಾಯ್ಕ ಇವರು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈಯವರು ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button
error: Content is protected !!